ಈ ನಡುವೆ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ ಸುರ್ಜೇವಾಲ, ಕಾಂಗ್ರೆಸ್‌ ಕಾರ್ಯಕರ್ತರ ಇಂತಹ ವರ್ತನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ನಾಗರಿಕ ಸಮಾಜ, ನಮ್ಮ ಸಂಸ್ಕೃತಿ ಹಾಗೂ ಸಂಸ್ಥಾಪನಾ ತತ್ವಗಳಿಗೆ ವಿರುದ್ಧವಾದುದು ಎಂದರು.

ನವದೆಹಲಿ: ಜಾನುವಾರು ಪೇಟೆಯಿಂದ ಕಸಾಯಿ ಖಾನೆಗಳಿಗೆ ನೇರವಾಗಿ ರಾಸುಗಳನ್ನು ಮಾರಾಟ ಮಾಡುವಂತಿಲ್ಲ ಎಂಬ ಕೇಂದ್ರ ಸರ್ಕಾರದ ಸುತ್ತೋಲೆಯನ್ನು ಪ್ರತಿಭಟಿಸುವ ಭರದಲ್ಲಿ ಸಾರ್ವಜನಿಕವಾಗಿ 18 ತಿಂಗಳ ಎಮ್ಮೆ ಕರುವನ್ನು ವಧೆ ಮಾಡಿದ್ದ ಕೇರಳದ ಮೂವರು ಕಾರ್ಯಕರ್ತರನ್ನು ಕಾಂಗ್ರೆಸ್‌ ಪಕ್ಷ ಅಮಾನತುಗೊಳಿಸಿದೆ. ತನ್ಮೂಲಕ ಬಹಿರಂಗವಾಗಿ ಎಮ್ಮೆ ಕರು ಕಡಿದ ಪ್ರಕರಣದಿಂದ ಅಂತರ ಕಾಯ್ದುಕೊಂಡಿದೆ.

ಕಣ್ಣೂರು ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಿಜಿಲ್‌ ಮಾಕುಟ್ಟಿ, ಕಾರ್ಯಕರ್ತ ರಾದ ಜೋಶಿ ಕಂಡತಿಲ್‌ ಹಾಗೂ ಶರಾಫುದ್ದೀನ್‌ ಅವರನ್ನು ಕಾಂಗ್ರೆಸ್‌ ಮತ್ತು ಯುವ ಕಾಂಗ್ರೆಸ್‌ ಎರಡರಿಂದಲೂ ಹೊರಹಾಕಲಾಗಿದೆ ಎಂದು ಪಕ್ಷದ ಮೂಲ ಗಳು ತಿಳಿಸಿವೆ. ಈ ನಡುವೆ ದೆಹಲಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ರಣದೀಪ್‌ ಸುರ್ಜೇವಾಲ, ಕಾಂಗ್ರೆಸ್‌ ಕಾರ್ಯಕರ್ತರ ಇಂತಹ ವರ್ತನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಇದು ನಾಗರಿಕ ಸಮಾಜ, ನಮ್ಮ ಸಂಸ್ಕೃತಿ ಹಾಗೂ ಸಂಸ್ಥಾಪನಾ ತತ್ವಗಳಿಗೆ ವಿರುದ್ಧವಾದುದು ಎಂದರು. ಅಲ್ಲದೆ, ಈ ಕೃತ್ಯ ಎಸಗಿದ ಯಾರಿಗೂ ಪಕ್ಷದಲ್ಲಿ ಜಾಗ ವಿಲ್ಲ. ಹೀಗಾಗಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ತಿಳಿಸಿದರು.