ಬೆಂಗಳೂರು[ಜು. 23] ಮುಳಬಾಗಿಲು ಪಕ್ಷೇತರ ಶಾಸಕ ನಾಗೇಶ್ ವಾಸವಿದ್ದರೂ ಎನ್ನಲಾದ ಅಪಾರ್ಟ್ ಮೆಂಟ್ ಮುಂದೆ ಘರ್ಷಣೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರು  ಸೆಕ್ಯೂರಿಟಿ ಗಾರ್ಡ್ ಗಳ ಜತೆ ವಾಗ್ಯುದ್ಧ ಮಾಡಿದ್ದು ಅಪಾರ್ಟ್ ಮೆಂಟ್ ಒಳಕ್ಕೆ ನುಗ್ಗಲು ಯತ್ನ ಮಾಡಿದ್ದಾರೆ.

ಕಳೆದ 15 ದಿನಗಳಿಂದ ರಾಜ್ಯದ ಎಲ್ಲ ಕಡೆ ವಿಶ್ವಾಸಮತದ ಚರ್ಚೆಯೇ ನಡೆಯುತ್ತಿದೆ.  ವಿಧಾನಸೌಧದಲ್ಲಿ ಎಲ್ಲ ನಾಯಕರು ತಮ್ಮ ಅಭಿಪ್ರಾಯ ಮಂಡಿಸುತ್ತಲೇ ಇದ್ದಾರೆ.  ಮಾಜಿ ಸಿಎಂ ಸಿದ್ದರಾಮಯ್ಯ ಸುದೀರ್ಘ ಭಾಷಣ ಮಾಡುತ್ತಿದ್ದಾರೆ.

ಇದೆಲ್ಲದರ ನಡುವೆ ಮುಂಬೈನಲ್ಲಿರುವ 15 ಜನ ಶಾಸಕರು ಸೇರಿ 20 ಜನರು ಸದನಕ್ಕೆ ಬಂದಿಲ್ಲ. ಅವರಲ್ಲಿ ಪಕ್ಷೇತರ ಶಾಸಕರಾದ ಮುಳುಬಾಗಿಲು ನಾಗೇಶ್ ಸಹ ಇದ್ದಾರೆ. ನಾಗೇಶ್ ಬಿಜೆಪಿ ನಾಯಕರ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ ಕಾರ್ಯಕರ್ತರು ರೇಸ್ ಕೋರ್ಸ್ ಸಮೀಪದ ಅಪಾರ್ಟ್ ಮೆಂಟ್ ಒಳಕ್ಕೆ ನುಗ್ಗಲು ಯತ್ನ ಮಾಡಿದ್ದಾರೆ.