ರಾಯಚೂರು : ಬಿಜೆಪಿ ವಿರುದ್ಧ ಕಾಂಗ್ರೆಸ್ ಗೆಲುವು

First Published 17, Jun 2018, 8:57 PM IST
Congress wins ZP BYpoll at Raichur
Highlights
  • 2,353 ಮತಗಳ ಅಂತರದಿಂದ ಕಾಂಗ್ರೆಸಿಗೆ ಗೆಲುವು
  • ಜೆಡಿಎಸ್‌ನಿಂದ ಯಾವ ಅಭ್ಯರ್ಥಿಯೂ ಸ್ಪರ್ಧಿಸಿರಲಿಲ್ಲ

ರಾಯಚೂರು[ಜೂ.17]: ಜಿಲ್ಲೆಯ ದೇವದುರ್ಗ ತಾಲ್ಲೂಕು ಕ್ಯಾದಿಗೇರಾ ಜಿ.ಪಂ. ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

ಕೈ ಅಭ್ಯರ್ಥಿ ಸಂದೀಪ ನಾಯಕ ನಾಗೋಲಿ 2,353 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಕೃಷ್ಣಪ್ಪ ನಾಯಕ ಅವರನ್ನು ಸೋಲಿಸಿದರು. ಸಂದೀಪ ನಾಯಕ ನಾಗೋಲಿ 10883 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ 8,529 ಮತಗಳಿಗೆ ತೃಪ್ತಿಪಟ್ಟುಕೊಂಡರು.  

ಈ ಹಿಂದೆ ಕ್ಯಾದಿಗೇರಾ ಜಿ.ಪಂ. ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಅಭ್ಯರ್ಥಿ ವೆಂಕಟೇಶ ಪೂಜಾರಿ ವಿಧಾನಸಭೆ  ಚುನಾವಣೆ ಸಂದರ್ಭದಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಜೆಡಿಎಸ್'ಗೆ ಸೇರ್ಪಡೆಯಾಗಿದ್ದರು. ಈ ಹಿನ್ನಲೆಯಲ್ಲಿ ಚುನಾವಣೆ ನಡೆದಿತ್ತು. ಜೆಡಿಎಸ್‌ನಿಂದ ಯಾವ ಅಭ್ಯರ್ಥಿಯೂ ಸ್ಪರ್ಧಿಸಿರಲಿಲ್ಲ.

loader