2014ರ ಚುನಾವಣೆ ವೇಳೆ ಬಿಜೆಪಿ ಪ್ರಮುಖವಾಗಿ ಗಂಗೆ ಶುದ್ಧತೆ ಬಗ್ಗೆ ಪ್ರಮಾಣ ಮಾಡಿತ್ತು. ಆದರೆ ಇಲ್ಲೊಂದು ಚಿತ್ರ ಹರಿದಾಡುತ್ತಿದ್ದು ಇದರ ಸತ್ಯಾಸತ್ಯತೆ ಬಗ್ಗೆ ಇಲ್ಲಿದೆ ಮಾಹಿತಿ. 

ನವದೆಹಲಿ : 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಪಡೆಯಲು ಅನೇಕ ರೀತಿಯ ಚಾಲೇಂಜ್ ಗಳನ್ನು ಸ್ವೀಕಾರ ಮಾಡಿತ್ತು. ಪ್ರಮುಖವಾಗಿ ಈ ಚಾಲೇಂಜ್ ನಲ್ಲಿ ಗಂಗಾ ನದಿಯನ್ನು ಶುದ್ದೀಕರಣ ಮಾಡುವುದು ಪ್ರಮುಖ ವಿಚಾರವಾಗಿತ್ತು. 

ಇದೀಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮುಂದಿನ ಚುನಾವಣೆಯಲ್ಲಿ ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಸುಳ್ಳು ಫೊಟೊವನ್ನು ಟ್ವೀಟ್ ಮಾಡಿ ಗಂಗಾ ನದಿಯ ಶುದ್ಧೀಕರಣ ಮಾಡುವ ಬಗ್ಗೆ ಭರವಸೆ ನೀಡಿದ್ದ ಬಿಜೆಪಿ ಮಾತು ಮಾತಾಗಿಯೇ ಉಳಿದಿದೆ ಎಂದು ಟ್ವೀಟ್ ಮಾಡಿದೆ. 

ಆದರೆ ಈ ಫೊಟೊದ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿದಾಗ ಈ ಫೊಟೊ 2009ಕ್ಕಿಂತಲೂ ಕೂಡ ಹಳಡೆಯದು ಎನ್ನುವ ವಿಚಾರ ತಿಳಿದು ಬಂದಿದೆ. ಅಲ್ಲದೇ ಇದು ರೊಮೇನಿಯನ್ ವೆಬ್ ಸೈಟ್ ಒಂದು 2009ಕ್ಕಿಂತ ಮೊದಲೇ ಬಳಕೆ ಮಾಡಿದ ಫೊಟೊ ಎನ್ನುವ ವಿಚಾರವೂ ಕೂಡ ರಿವೀಲ್ ಆಗಿದೆ.

Scroll to load tweet…
Scroll to load tweet…
Scroll to load tweet…