ರಾಜಸ್ಥಾನದ 6 ಬಿಎಸ್‌ಪಿ ಸದಸ್ಯರು ಕಾಂಗ್ರೆಸ್‌ಗೆ: ಮಾಯಾವತಿ ಸಿಡಿಮಿಡಿ| ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ, ಬಿಎಸ್‌ಪಿ ನಾಯಕರ ಸ್ಪಷ್ಟನೆ

ಜೈಪುರ[ಸೆ.18]: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜಸ್ಥಾನ ವಿಧಾನಸಭೆಯ ಎಲ್ಲಾ 6 ಬಿಎಸ್‌ಪಿ ಶಾಸಕರು ಮಂಗಳವಾರ ಕಾಂಗ್ರೆಸ್‌ ಸೇರಿದ್ದಾರೆ. ರಾಜ್ಯದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಬಿಎಸ್‌ಪಿ ಶಾಸಕರು ಹೇಳಿದ್ದಾರೆ.

ಆದರೆ ಶಾಸಕರ ಪಕ್ಷಾಂತರದ ಬಗ್ಗೆ ಕಿಡಿಕಾರಿರುವ ಬಿಎಸ್‌ಪಿ ಅಧ್ಯಕ್ಷೆ ಮಾಯಾವತಿ, ಕಾಂಗ್ರೆಸ್‌ ನಂಬಿಕೆ ದ್ರೋಹಿ ಪಕ್ಷ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಅಶೋಕ್‌ ಗೆಹ್ಲೋಟ್‌ ಸರ್ಕಾರಕ್ಕೆ ಬಿಎಸ್‌ಪಿ ಶಾಸಕರು ಬೇಷರತ್‌ ಬಾಹ್ಯ ಬೆಂಬಲ ನೀಡಿದ್ದರು. ಆದರೂ, ಶಾಸಕರನ್ನು ಕಾಂಗ್ರೆಸ್‌ ಖರೀದಿ ಮಾಡಿದೆ. ಈ ಮೂಲಕ ನಂಬಿಕೆ ದ್ರೋಹ ಎಸಗಿದೆ ಎಂದು ಕಿಡಿಕಾರಿದ್ದಾರೆ.

Scroll to load tweet…

ಕಾಂಗ್ರೆಸ್‌ ವಿರೋಧ ಪಕ್ಷಗಳ ಜತೆ ಸೆಣಸಾಡದೇ ಬೆಂಬಲಕ್ಕೆ ನಿಂತ ಪಕ್ಷಗಳಿಗೆ ಮೋಸ ಮಾಡುತ್ತಿದೆ. ಕಾಂಗ್ರೆಸ್‌ ನಂಬಿಕೆಗೆ ಅರ್ಹವಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಪರಿಶಿಷ್ಟ ಜಾತಿ, ಪಂಗಡ, ಹಿಂದುಗಳಿದ ವರ್ಗಗಳ ವಿರೋಧಿ ಪಕ್ಷ ಎಂಬುದು ಮತ್ತೊಮ್ಮೆ ರುಜುವಾತಾಗಿದೆ ಎಂದು ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.