ರಾಹುಲ್ ರ‍್ಯಾಲಿಗೆ ಹೆಚ್ಚು ಜನ ಕರೆತಂದವರಿಗೆ ಕಾಂಗ್ರೆಸ್ ಟಿಕೆಟ್

Congress Ticket to one who gets biggest crowd for Rahul rally
Highlights

ಜೂ.6ರಂದು ಮಧ್ಯಪ್ರದೇಶದ ಪಿಪ್ಲಿಯಾಮಂಡಿನಲ್ಲಿ ನಡೆಯಲಿರುವ ರಾಹುಲ್‌ ಗಾಂಧಿ ರ್ಯಾಲಿಗೆ ಹೆಚ್ಚಿನ ಜನರನ್ನು ಕರೆತಂದವರಿಗೆ 2019ರ ಲೋಕಸಭಾ ಟಿಕೆಟ್‌ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ

ಭೋಪಾಲ್‌: ಜೂ.6ರಂದು ಮಧ್ಯಪ್ರದೇಶದ ಪಿಪ್ಲಿಯಾಮಂಡಿನಲ್ಲಿ ನಡೆಯಲಿರುವ ರಾಹುಲ್‌ ಗಾಂಧಿ ರ್ಯಾಲಿಗೆ ಹೆಚ್ಚಿನ ಜನರನ್ನು ಕರೆತಂದವರಿಗೆ 2019ರ ಲೋಕಸಭಾ ಟಿಕೆಟ್‌ ನೀಡುವುದಾಗಿ ಕಾಂಗ್ರೆಸ್‌ ನಾಯಕರು ಘೋಷಿಸಿದ್ದಾರೆ.  

 ಜೂ.6ರ ರ್ಯಾಲಿಗೆ  ಸ್ಥಳೀಯ ನಾಯಕರು ಹೆಚ್ಚಿನ ಜನಸಂಖ್ಯೆಯಲ್ಲಿ ಕಾರ್ಯಕರ್ತರ ಕರೆತರಬೇಕು. ಯಾರು ಹೆಚ್ಚು ಜನಸಂಖ್ಯೆ ಮತ್ತು ಬೆಂಬಲಿಗರನ್ನು ಕರೆತರುತ್ತಾರೆಯೋ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ಹಾದಿ ಸುಗಮವಾಗಲಿದೆ ಎಂದು ಕಾಂಗ್ರೆಸ್‌ ಮುಖಂಡ ಸಂಜಯ್‌ ಕಪೂರ್‌ ಅವರು ಹೇಳಿದ್ದಾರೆ. 

ರಾಹುಲ್‌ ರಾರ‍ಯಲಿ ವೇಳೆ ಪ್ರತಿ ವಿಧಾನಸಭೆ ಕ್ಷೇತ್ರದಲ್ಲಿಯೂ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು, ಅವರು ಯಾವ ನಾಯಕ ಎಷ್ಟುಜನಸಂಖ್ಯೆಯನ್ನು ಸೇರಿಸಿದ್ದರು ಎಂಬ ಬಗ್ಗೆ ಗಮನಿಸುತ್ತಾರೆ. ಇನ್ನು ಕಳೆದ ವರ್ಷ ಭಾರೀ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಮಂಡಸೌರ್‌ ಅನ್ನು ಕಾಂಗ್ರೆಸ್‌ ಚುನಾವಣಾ ಪ್ರಚಾರದ ಮುಖ್ಯ ಕೇಂದ್ರವನ್ನಾಗಿ ಪರಿಗಣಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಹುಲ್‌ ಅವರ ರಾರ‍ಯಲಿಗೆ ಹೆಚ್ಚು ಜನಸಂಖ್ಯೆಯನ್ನು ಸೇರಿಸುವ ಮೂಲಕ ಬಿಜೆಪಿಗೆ ಒಂದು ಸ್ಪಷ್ಟಸಂದೇಶ ರವಾನಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಜೀತು ಪಟ್ವಾರಿ ಪಕ್ಷದ ಮುಖಂಡರಲ್ಲಿ ಕೇಳಿಕೊಂಡರು.

loader