ಎಲ್ಲ ಹಾಲಿ ಶಾಸಕರಿಗೆ ಟಿಕೆಟ್‌ ಕೊಡಿ: ಖರ್ಗೆ

Congress Ticket For All MLAs
Highlights

ಎರಡು ಬಾರಿ ಸತ​ತ​ವಾಗಿ ಶಾಸ​ಕ​ರಾಗಿ ಆಯ್ಕೆ​ಯಾ​ದ​ವ​ರಿಗೆ ನೇರ​ವಾಗಿ ಟಿಕೆಟ್‌ ಖಾತರಿಗೊಳಿ​ಸಬೇಕು ಮತ್ತು ಬಹು​ತೇಕ ಎಲ್ಲಾ ಹಾಲಿ ಶಾಸ​ಕ​ರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿ​ಕಾ​ರ್ಜುನ ಖರ್ಗೆ ಸಲಹೆ ನೀಡಿ​ದ್ದಾ​ರೆ ಎಂದು ತಿಳಿದು ಬಂದಿ​ದೆ.

ಬೆಂಗಳೂರು : ಎರಡು ಬಾರಿ ಸತ​ತ​ವಾಗಿ ಶಾಸ​ಕ​ರಾಗಿ ಆಯ್ಕೆ​ಯಾ​ದ​ವ​ರಿಗೆ ನೇರ​ವಾಗಿ ಟಿಕೆಟ್‌ ಖಾತರಿಗೊಳಿ​ಸಬೇಕು ಮತ್ತು ಬಹು​ತೇಕ ಎಲ್ಲಾ ಹಾಲಿ ಶಾಸ​ಕ​ರಿಗೆ ಟಿಕೆಟ್‌ ನೀಡುವುದು ಸೂಕ್ತ ಎಂದು ಹಿರಿಯ ಕಾಂಗ್ರೆಸ್‌ ಮುಖಂಡ ಮಲ್ಲಿ​ಕಾ​ರ್ಜುನ ಖರ್ಗೆ ಸಲಹೆ ನೀಡಿ​ದ್ದಾ​ರೆ ಎಂದು ತಿಳಿದು ಬಂದಿ​ದೆ.

ಬುಧ​ವಾರ ನಡೆದ ಕಾಂಗ್ರೆಸ್‌ ಚುನಾ​ವಣೆ ಸಮಿತಿ ಸಭೆ​ಯಲ್ಲಿ ಮಾತ​ನಾ​ಡಿದ ಅವರು, ಪ್ರಸ್ತುತ ರಾಜ್ಯದಲ್ಲಿ ಆಡ​ಳಿತ ವಿರೋಧಿ ಅಲೆ​ಯಿಲ್ಲ. ಆದರೆ, ಟಿಕೆಟ್‌ ಹಂಚಿ​ಕೆ​ಯಲ್ಲಿ ಗೊಂದಲ ಮಾಡಿ​ಕೊಂಡರೆ ಆಂತ​ರಿ​ಕ​ವಾ​ಗಿಯೇ ವಿರೋಧಿ ಅಲೆ ಸೃಷ್ಟಿ​ಯಾ​ಗು​ತ್ತದೆ. ಇದು ಆಗ​ದಂತೆ ಎಚ್ಚ​ರಿಕೆ ವಹಿ​ಸ​ಬೇಕು. ಹಾಲಿ ಶಾಸಕರು ಗೆಲ್ಲಲಿ ಅಥವಾ ಸೋಲಲಿ, ಅವರಿಗೆ ಟಿಕೆಟ್‌ ನೀಡಲೇಬೇಕಾಗುತ್ತದೆ. ಒಂದು ವೇಳೆ ಇವರು ಬಂಡಾ​ಯ​ವೆ​ದ್ದರೆ ಪಕ್ಷ ಗೆಲ್ಲುವ ಸಾಧ್ಯ​ತೆಯೂ ಇಲ್ಲ​ವಾ​ಗು​ತ್ತದೆ ಎಂದು ಸಲಹೆ ನೀಡಿ​ದರು ಎನ್ನ​ಲಾ​ಗಿ​ದೆ.

ಈ ವೇಳೆ ಕೆಪಿ​ಸಿಸಿ ಅಧ್ಯ​ಕ್ಷ ಡಾ

ಜಿ.ಪರ​ಮೇ​ಶ್ವರ್‌ ಅವರು, ಕಳೆದ ಬಾರಿ ಗೆದ್ದ ಶಾಸ​ಕರ ಜತೆಗೆ, ಗೆಲ್ಲುವ ಹಂತದಲ್ಲಿ ಎಡ​ವಿ​ದ​ವ​ರಿಗೂ ಒಂದು ಅವ​ಕಾಶ ದೊರೆ​ಯ​ಬೇಕು ಎಂದು ವಾದಿ​ಸಿ​ದರು ಎನ್ನ​ಲಾ​ಗಿದೆ. ಈ ಸಂದ​ರ್ಭ​ದಲ್ಲಿ ಮಧ್ಯ​ಪ್ರ​ವೇ​ಶಿ​ಸಿದ ರಾಜ್ಯ ಉಸ್ತು​ವಾರಿ ಕೆ.ಸಿ.ವೇಣುಗೋಪಾಲ್‌, ಸದ್ಯ ಪಕ್ಷದ ಹಾಲಿ ಶಾಸಕರಿಗೆ ಟಿಕೆಟ್‌ ನೀಡುವ ವಿಚಾರದ ಬಗ್ಗೆ ಚರ್ಚೆ ಮಾಡು​ವುದು ಬೇಡ ಎಂದಾ​ಗ ಸಹಮತ ವ್ಯಕ್ತ​ಪ​ಡಿ​ಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಮುಂದಿನ ಸಭೆ​ಯಲ್ಲಿ ತೀರ್ಮಾನ ಮಾಡೋಣ ಎಂದು ಚರ್ಚೆಗೆ ತೆರೆ ಎಳೆ​ದರು ಎಂದು ಮೂಲ​ಗಳು ತಿಳಿ​ಸಿ​ವೆ.

loader