ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಟೀಕೆಗೆ ಕಾಂಗ್ರೆಸ್ ತಿರುಗೇಟು ತುಲನಾತ್ಮಕ ಅಂಕಿಅಂಶಗಳನ್ನು ವಿವರಿಸಿರುವ ವಿಡಿಯೋ ಬಿಡುಗಡೆ
ಬೆಂಗಳೂರು: ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಬಗ್ಗೆ ಪ್ರಧಾನಿ ಮೋದಿ ಟೀಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಕಳೆದ ಸೋಮವಾರ ಖಾಸಗಿ ಆಂಗ್ಲ ಸುದ್ದಿವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿ, ದೇಶದ ಪರಿಸ್ಥಿತಿ ಈಗ ಹೇಗಿದೆಯೆಂದು ತಿಳಿಯಲು, ಯುಪಿಎ ಸರ್ಕಾರದ 10 ವರ್ಷಗಳು ಹಾಗೂ ಎನ್’ಡಿಎ ಸರ್ಕಾರದ 3 ವರ್ಷಗಳ ಸಾಧನೆ ಬಗ್ಗೆ ತುಲನೆ ಮಾಡಬೇಕು ಎಂದಿದ್ದರು.
ಅದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ತುಲನಾತ್ಮಕ ಅಂಕಿಅಂಶಗಳನ್ನು ವಿವರಿಸಿರುವ ವಿಡಿಯೋ ಬಿಡುಗಡೆಮಾಡಿದೆ.
