Asianet Suvarna News Asianet Suvarna News

ರಾಹುಲ್ ಗಾಂಧಿ ಅಮೆರಿಕಾ ಹೇಳಿಕೆಗೆ ಟಾಂಗ್ ಕೊಡದ ಕೆಪಿಸಿಸಿ ಸೋಷಿಯಲ್ ಮೀಡಿಯಾ ಮೇಲೆ ವೇಣುಗೋಪಾಲ್ ಗರಂ

ರಾಹುಲ್ ಗಾಂಧಿ ಅಮೆರಿಕಾ ಹೇಳಿಕೆ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿರುವುದಕ್ಕೆ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸದ ಕೆಪಿಸಿಸಿ ಸೋಷಿಯಲ್ ಮೀಡಿಯಾವನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.

Congress State Incharge Venugopal Anger on KPCC Social Media

ಬೆಂಗಳೂರು (ಸೆ.14): ರಾಹುಲ್ ಗಾಂಧಿ ಅಮೆರಿಕಾ ಹೇಳಿಕೆ ಬಿಜೆಪಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗುತ್ತಿರುವುದಕ್ಕೆ ರಾಹುಲ್ ಗಾಂಧಿ ಹೇಳಿಕೆಯನ್ನು ಸಮರ್ಥಿಸದ ಕೆಪಿಸಿಸಿ ಸೋಷಿಯಲ್ ಮೀಡಿಯಾವನ್ನು ಕಾಂಗ್ರೆಸ್ ರಾಜ್ಯ ಉಸ್ತುವಾರಿ ತರಾಟೆಗೆ ತೆಗೆದುಕೊಂಡಿದ್ದಾರೆ.

‘ಇಂಡಿಯಾ@70: ರಿಪ್ಲೆಕ್ಷನ್ ಆನ್ ದ ಪಾತ್ ಫಾರ್ವರ್ಡ್' ಎಂಬ ವಿಷಯವಾಗಿ ತಮ್ಮ ಭಾಷಣದ ಸಂದರ್ಭದಲ್ಲಿ ಭಾರತದ ಪ್ರಜಾಪ್ರಭುತ್ವದ ಪ್ರಸ್ತುತತೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡುತ್ತಿದ್ದರು. ಇದೇ ವೇಳೆಯಲ್ಲಿ ಭಾರತದ ಕೆಳಮನೆಯ ಒಟ್ಟು ಸಂಸದರ ಬಗ್ಗೆ ಹೇಳುವಾಗ ಯಡವಟ್ಟು ಮಾಡಿಕೊಂಡರು. 545 ಎಂದು ಹೇಳುವ ಬದಲು 546 ಎಂದು ಉಚ್ಛರಿಸಿದರು. ಈ ತಪ್ಪು ಹೇಳಿಕೆ ಸಾಮಾಜಿಕ ಮಾಧ್ಯಮ ಅದರಲ್ಲೂ ಟ್ವಿಟರ್'ನಲ್ಲಿ ವೈರಲ್ ಆಗಿದೆ. ಇದನ್ನು ಬಿಜೆಪಿ ಟ್ರೋಲ್ ಮಾಡುತ್ತಿದೆ. ಆದರೆ ಕೆಪಿಸಿಸಿ ಬಿಜೆಪಿಗೆ ಟಾಂಗ್ ಕೊಡದೇ ಮೌನ ವಹಿಸಿರುವುದಕ್ಕೆ ವೇಣುಗೋಪಾಲ್ ಗರಂ ಆಗಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷ ರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.  ಸೆ.16ರಂದು ವೇಣುಗೋಪಾಲ್ ಸಭೆ ಕರೆದಿದ್ದು  ಕೆಪಿಸಿಸಿ ಸೋಷಿಯಲ್‌ ಮಿಡಿಯಾ ಗ್ರೂಪ್’ಗೆ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ. ಅಂದು ಸಂಜೆ ಬೆಂಗಳೂರು ಕಾರ್ಪೊರೇಟರುಗಳ ಸಭೆಯನ್ನು ಕರೆಯಲಾಗಿದೆ. ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ವೇಣುಗೋಪಾಲ್ ಮತ್ತೆ ಸಭೆ ಕರೆದಿದ್ದಾರೆ.

 

 

Follow Us:
Download App:
  • android
  • ios