ಪ್ರಧಾನಿ ಮೋದಿ ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ. ಮೋದಿ 3 ವರ್ಷದಲ್ಲಿ ಹೇಳಿದ್ದು ಒಂದನ್ನು ಮಾಡಿ ತೋರಿಸಿಲ್ಲ. ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೋದಿ ಎಲ್ಲಾ ಯೋಜನೆಗಳು ಫ್ಲಾಪ್ ಆಗಿವೆ : ಕಾಂಗ್ರೆಸ್
ನವದೆಹಲಿ (ಮೇ.16): ನರೇಂದ್ರ ಮೋದಿ ಸರ್ಕಾರಕ್ಕೆ 3 ವರ್ಷ ತುಂಬಿದೆ. ಮೋದಿ ಸರ್ಕಾರದ ಸಾಧನೆಯೇನು ಎಂದು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪ್ರಧಾನಿ ಮೋದಿ ದೇಶಕ್ಕೆ ಸುಳ್ಳು ಹೇಳುತ್ತಿದ್ದಾರೆ. ಮೋದಿ 3 ವರ್ಷದಲ್ಲಿ ಹೇಳಿದ್ದು ಒಂದನ್ನು ಮಾಡಿ ತೋರಿಸಿಲ್ಲ. ಸ್ವಚ್ಛ ಭಾರತ್, ಮೇಕ್ ಇನ್ ಇಂಡಿಯಾ, ಡಿಜಿಟಲ್ ಇಂಡಿಯಾ, ಮೋದಿ ಎಲ್ಲಾ ಯೋಜನೆಗಳು ಫ್ಲಾಪ್ ಆಗಿವೆ. ನೋಟ್ ನಿಷೇಧದಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ. ಕೇವಲ ಮೋದಿ ಹೇಳಿಕೆ ನೀಡುತ್ತಾಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
