ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ರಾಜಸ್ಥಾನದಲ್ಲಿ ಬಿಜೆಪಿ ಪರವಾಗಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್  ಮೇಲೆ ವಾಗ್ದಾಳಿ ಮಾಡಿರುವ ಯೋಗಿ ಭಯೋತ್ಪಾದನೆ ಬಗ್ಗೆ ಮಾತನಾಡಿದ್ದಾರೆ.

ಮಕ್ರಾನಾ[ನ,26] ನವೆಂಬರ್ 11 ರ ದೇಶ ಕಂಡ ಕರಾಳ ಭಯೋತ್ಪಾದನಾ ದಾಳಿಗೆ ಅಂದಿನ ಕಾಂಗ್ರೆಸ್ ಸರಕಾರ ಉಗ್ರರಿಗೆ ಬಿರಿಯಾನಿ ಬಡಿಸಿದ್ದೆ ಕಾರಣ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಆರೋಪಿಸಿದ್ದಾರೆ.

ಒಡೆದು ಆಳುವ ನೀತಿ ಮತ್ತೆ ಪ್ರಯೋಗಿಸಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಯತ್ನ ಮಾಡುತ್ತಿದೆ. ಇದೇ ಕಾರಣಕ್ಕೆ ಕಾಂಗ್ರೆಸ್ ಅವಧಿಯಲ್ಲಿ ಭಯೋತ್ಪಾದನೆ ಮೀತಿ ಮೀರಿದ ಮಟ್ಟಕ್ಕೆ ಹೋಗಿತ್ತು ಎಂದಿದ್ದಾರೆ.

ಕಾಂಗ್ರೆಸ್ ಯಾವ ಉಗ್ರರಿಗೆ ಬಿರಿಯಾನಿ ನೀಡಿತ್ತೋ ಅದೇ ಉಗ್ರರಿಗೆ ನಾವಿಂದು ಬುಲೆಟ್ ಉಣಿಸುತ್ತಿದ್ದೇವೆ ಸರಿಯಾಗಿ 10 ವರ್ಷದ ಹಿಂದೆ ಇದೆ ದಿನದಂದು ಮುಂಬೈಗೆ ಉಗ್ರರು ದಾಳಿ ಮಾಡಿದ್ದರು.

Scroll to load tweet…