ಬೆಂಗಳೂರು[ಅ. 10]  ವಿಧಾನಸಭೆ ವಿಪಕ್ಷ ನಾಯಕರಾಗಿ ಮಾಜಿ ಸಿಎಂ, ಕಾಂಗ್ರೆಸ್ ಹಿರಿಯ ನಾಯಕ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್ ಶಾಸಕಾಂಗ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದ್ದು ಕುತೂಹಲ ಕೆರಳಿಸಿದ್ದ ವಿಪಕ್ಷ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಪರಿಷತ್ ವಿಪಕ್ಷ ನಾಯಕರಾಗಿ ಎಸ್.ಆರ್ .ಪಾಟೀಲ್ ಅವರನ್ನು ಆಯ್ಕೆ ಮಾಡಲಾಗಿದೆ.

’ಅಧಿಕಾರವಿಲ್ಲದೇ ಸಿದ್ದು, HDK ಹುಚ್ಚರಾಗ್ತಿದ್ದಾರೆ’

ವಿಧಾನ ಸಭೆ ಅಧಿವೇಶನ ಮುಂದುವರಿಸುವ ಬಗ್ಗೆ ಬೇಡಿಕೆ ಇಡಲು ತೀರ್ಮಾನ ಸಹ ತೆಗೆದುಕೊಳ್ಳಲಾಗಿದೆ.   ಕನಿಷ್ಠ 15 ದಿನ ಅಧಿವೇಶನ ನಡೆಸುವಂತೆ ಒತ್ತಾಯಿಸಲು ಸಿಎಲ್.ಪಿ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.

ಉತ್ತರ ಕರ್ನಾಟಕ ನೆರೆ ಮತ್ತು ಬರ ವಿಚಾರವಾಗಿ ಸದನದಲ್ಲಿ ಎಲ್ಲ ಶಾಸಕರು ಸರ್ಕಾರದ ವಿರುದ್ಧ ಮಾತನಾಡಬೇಕು. ಪ್ರವಾಹ ವಿಚಾರವಾಗಿ ಸದನದಲ್ಲಿ ಧರಣಿ ನಡೆಸುವ ವಿಚಾದ ಬಗ್ಗೆಯೂ ನಿರ್ಧರಿಸೋಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.