ಬೆಂಗಳೂರು [ಜು.22] : ರಾಜ್ಯ ರಾಜಕೀಯ ಡ್ರಾಮಾ ಹಲವು ದಿನಗಳಿಂದ ನಡೆಯುತ್ತಿದ್ದು, ಸರ್ಕಾರ ವಿಶ್ವಾಸ ಮತ ಯಾಚನೆಗೆ ಮುಂದಾಗಿದೆ. ಇದೇ ವೇಳೆ ಕಲಾಪದಲ್ಲಿ ಪರಸ್ಪರ ಆರೋಪ ಪ್ರತ್ಯಾರೋಗಳ ಸುರಿಮಳೆಯಾಗುತ್ತಿದೆ. 

ಅತೃಪ್ತರಾಗಿ ಮುಂಬೈಗೆ ತೆರಳಿರುವ ಮೈತ್ರಿ ಪಾಳಯದ ಶಾಸಕರ ಜೊತೆ ಬಿಜೆಪಿ ಸಂಪರ್ಜದಲ್ಲಿ ಇದೆ. ಇದು ಸ್ಪಷ್ಟ ಎಂದು ಗ್ರಾಮೀಣ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ನೇರವಾಗಿ ಆರೋಪಿಸಿದರು. 

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಧಾನಸಭೆ ಚುನಾವಣೆ ನಡೆದ ದಿನದಿಂದಲೂ ಅತೃಪ್ತ ನಾಯಕ ಎಂದೇ ಗುರುತಿಸಿಕೊಂಡ ರಮೇಶ್ ಜಾರಕಿಹೊಳಿ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಕೃಷ್ಣ ಬೈರೇಗೌಡ ಹೇಳಿದರು.

ಲೋಕಸಭಾ ಚುನಾವಣೆ ವೇಳೆಯೂ ಕೂಡ ಬಿಜೆಪಿ ಜೊತೆಗೆ ರಮೇಶ್ ಜಾರಕಿಹೊಳಿ ಗುರುತಿಸಿಕೊಂಡಿದ್ದರು. ಈಗ ಹಲವು ಮೈತ್ರಿ ಪಾಳಯದ ಶಾಸಕರನ್ನು ಒಗ್ಗೂಡಿಸಿ ಮುಂಬೈಗೆ ತೆರಳಿ ಬಿಜೆಪಿ ನಾಯಕರೊಂದಿಗೆ ನಂಟು ಹೊಂದಿದ್ದಾರೆ ಎಂದರು.