ಕೆಸಿಆರ್ ಅವರನ್ನು ಸೋಲಿಸಲೇ ಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್- ಟಿಡಿಪಿ ಏನಾದರೂ ಕೈಜೋಡಿಸಿದರೆ ರಾವ್ ಅವರಿಗೆ ಚುನಾವಣೆ ತುಸು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. ಹಿಂದಿನ ವೈರತ್ವ  ಮರೆತು ಇದೀಗ ಒಂದಾಗಲು ಕಾಂಗ್ರೆಸ್ ಹಾಗೂ ಟಿಡಿಪಿ ಪ್ರಯತ್ನಿಸುತ್ತಿವೆ. 

ಹೈದರಾಬಾದ್: ಚುನಾವಣಾ ರಹಣ ಕಹಳೆ ಮೊಳಗಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಅವರನ್ನು ಮಣಿಸಲು ಕಾಂಗ್ರೆಸ್ ಹಾಗೂ ಅದರ ಎದುರಾಳಿ ಪಕ್ಷ ತೆಲುಗುದೇಶಂ ಏನು ಮಾಡುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. 

ಒಂದು ವೇಳೆ, ಕೆಸಿಆರ್ ಅವರನ್ನು ಸೋಲಿಸಲೇ ಬೇಕು ಎಂಬ ಉದ್ದೇಶದಿಂದ ಕಾಂಗ್ರೆಸ್- ಟಿಡಿಪಿ ಏನಾದರೂ ಕೈಜೋಡಿಸಿದರೆ ರಾವ್ ಅವರಿಗೆ ಚುನಾವಣೆ ತುಸು ಕಷ್ಟವಾಗಲಿದೆ ಎಂದು ಹೇಳಲಾಗುತ್ತಿದೆ. 

ಈ ಹಿನ್ನೆಲೆಯಲ್ಲಿ ಅಂತಹ ಪ್ರಯತ್ನವೊಂದು ತೆಲಂಗಾಣದಲ್ಲಿ ಈಗಾಗಲೇ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸಿದರೆ ಕೆಸಿಆರ್ ಅವರನ್ನು ಕಟ್ಟಿ ಹಾಕುವುದು ಕಷ್ಟ. ಹೀಗಾಗಿ ಹಿಂದಿನ ವೈರತ್ವ ಮರೆತು ಒಂದಾಗಲು ಕಾಂಗ್ರೆಸ್ ಹಾಗೂ ಟಿಡಿಪಿ ಪ್ರಯತ್ನಿಸುತ್ತಿವೆ. 

ಪ್ರತಿಪಕ್ಷಳ ಮಹಾಕೂಟವನ್ನು ರಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಈಗಾಗಲೇ ಕಾರ್ಯಪ್ರವೃತ್ತ ವಾಗಿದ್ದು, ಅದರ ಸ್ಥಳೀಯ ನಾಯಕರು ಈಗಾಗಲೇ ಟಿಡಿಪಿ, ತೆಲಂಗಾಣ ಜಂಟಿ ಕ್ರಿಯಾ ಸಮಿತಿ, ತೆಲಂಗಾಣ ಜನ ಸಮಿತಿ, ಸಿಪಿಐ, ಸಿಪಿಎಂ, ಬಿಎಸ್ಪಿ, ಜತೆಗೆ ಮಾತುಕತೆಯಲ್ಲಿ ನಿರತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.