ಚುನಾವಣೆಯಲ್ಲಿ ಮೋದಿ ಮತ್ತು ಬಿಜೆಪಿ ಪ್ರಚಾರ ಸುಳ್ಳಿನ ಕಂತೆ ಎಂದ ರಾಹುಲ್|ಸ್ವಕ್ಷೇತ್ರ ವೈನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿ| ಮೋದಿ ಭಾಷಣದ ವೈಖರಿ ಖಂಡಿಸಿದ ಕಾಂಗ್ರೆಸ್ ಅಧ್ಯಕ್ಷ|‘ಕಾಂಗ್ರೆಸ್ ಮೋದಿ ಎಂಬ ವಿಷದ ಜೊತೆ ಹೋರಾಡುತ್ತಿದೆ’| ‘ದೇಶವನ್ನು ವಿಭಜಿಸಲು ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ’| ‘ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಪ್ರೀತಿಯ ರಾಜಕಾರಣದ ತಿರುಗೇಟು’|
ವೈನಾಡು(ಜೂ.08): ಪ್ರಧಾನಿ ಮೋದಿ ಮತ್ತು ಬಿಜೆಪಿಯ ಚುನಾವಣಾ ಪ್ರಚಾರ ದ್ವೇಷ ಮತ್ತು ಸುಳ್ಳಿನಿಂದ ಕೂಡಿತ್ತು ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಸ್ವಕ್ಷೇತ್ರ ವೈನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ಮೋದಿ ಮತ್ತು ಬಿಜೆಪಿಯ ಚುನಾವಣಾ ಭಾಷಣದ ವೈಖರಿಯನ್ನು ಖಂಡಿಸಿದರು. ನಾವು ಮೋದಿ ಎಂಬ ವಿಷದ ಜೊತೆ ಹೋರಾಡುತ್ತಿದ್ದು, ದೇಶವನ್ನು ವಿಭಜಿಸಲು ಮೋದಿ ದ್ವೇಷದ ವಿಷ ಬಿತ್ತುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಬಿಜೆಪಿಯ ದ್ವೇಷದ ರಾಜಕಾರಣಕ್ಕೆ ಕಾಂಗ್ರೆಸ್ ಪ್ರೀತಿಯ ರಾಜಕಾರಣದ ತಿರುಗೇಟು ನೀಡಲಿದೆ ಎಂದು ರಾಹುಲ್ ಈ ವೇಳೆ ಕಾರ್ಯಕರ್ತರನ್ನು ಹುರಿದುಂಬಿಸಿದರು.
