ಕ್ರಿಕೆಟ್ ದಿಗ್ಗಜ ಹಾಗೂ ಸಂಸದ ಸಚಿನ್ ತೆಂಡೂಲ್ಕರ್ ಇಂದು ಸಂಸತ್ತಿನಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ‘ಔಟಾದ’ ಘಟನೆ ನಡೆದಿದೆ.

ನವದೆಹಲಿ: ಕ್ರಿಕೆಟ್ ದಿಗ್ಗಜ ಹಾಗೂ ಸಂಸದ ಸಚಿನ್ ತೆಂಡೂಲ್ಕರ್ ಇಂದು ಸಂಸತ್ತಿನಲ್ಲಿ ಮೊದಲ ಭಾಷಣ ಮಾಡುವ ಮುಂಚೆಯೇ ‘ಔಟಾದ’ ಘಟನೆ ನಡೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ರಾಜ್ಯಸಭೆಯಲ್ಲಿ ಕ್ರೀಡೆಗೆ ಸಂಬಂಧಿಸಿದ ಚರ್ಚೆಯನ್ನು ಇಂದು ಸಚಿನ್ ಆರಂಭಿಸಬೇಕಿತ್ತು. ಅದಕ್ಕಾಗಿಯೇ ಎಂದು ಸಚಿನ್ ಎದ್ದು ನಿಂತಾಗ, ಕಾಂಗ್ರೆಸ್ ಸಂಸದರ ಗದ್ದಲ ಆರಂಭವಾಗಿದೆ.

ಗುಜರಾತ್ ಚುನಾವಣಾ ರ್ಯಾಲಿಯೊಂದರಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಆಕ್ಷೇಪಕಾರಿ ಹೇಳಿಕೆ ನೀಡಿದ್ದಾರೆ, ಅದರ ಬಗ್ಗೆ ಸಂಸತ್ತಿನಲ್ಲಿ ಚರ್ಚೆಯಾಗಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಸಂಸದರು ಗದ್ದಲ ನಡೆಸಿದ್ದಾರೆ.

2012ರಲ್ಲಿ ರಾಜ್ಯಸಭೆಗೆ ನಾಮಾಂಕಿತರಾಗಿರುವ ಸಚಿನ್, ಅಧಿವೇಶನಗಳಲ್ಲಿ ಕಡಿಮೆ ಹಾಜರಾತಿ ಹಿನ್ನೆಲೆಯಲ್ಲಿ ಟೀಕೆಗೊಳಗಾಗಿದ್ದಾರೆ. ಆದರೆ ಇದೇ ಮೊದಲ ಬಾರಿ, ಭಾರತದಲ್ಲಿ ಕ್ರೀಡೆಯ ಭವಿಷ್ಯದ ಬಗ್ಗೆ ಸಣ್ಣ ಚರ್ಚೆಯನ್ನು ನಡೆಸುವ ಬಗ್ಗೆ ನೋಟಿಸ್ ನೀಡಿದ್ದರು. ಆದರೆ ಕಾಂಗ್ರೆಸ್ ಸಂಸದರ ಗದ್ದಲದಿಂದಾಗಿ ಸಚಿನ್’ಗೆ ಮಾತನಾಡುವ ಅವಕಾಶ ಸಿಗಲಿಲ್ಲ.

ಈ ವೇಳೆ ರಾಜ್ಯಸಭಾಧ್ಯಕ್ಷ ವೆಂಕಯ್ಯ ನಾಯ್ಡು ಸಂಸದರನ್ನು ಸಮಾಧಾನಪಡಿಸಲು ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.