ಸಚಿವ ಹುದ್ದೆ ವಂಚಿತ ಕಾಂಗ್ರೆಸ್ ಅತೃಪ್ತ ಶಾಸಕರ ಮುಂದಿನ ನಡೆ

First Published 7, Jun 2018, 7:29 PM IST
Congress MLAs Left Out of Cabinet To Meet Rahul Gandhi
Highlights
  • ಕಾಂಗ್ರೆಸ್ ಅತೃಪ್ತ ಶಾಸಕರ ಮುಂದಿನ ನಡೆ ದೆಹಲಿಯೆಡೆ; ರಾಹುಲ್ ಭೇಟಿಗೆ ಸಿದ್ಧತೆ
  • ಅತೃಪ್ತರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಹೈಕಮಾಂಡ್‌ನಿಂದ ಪರಂಗೆ ಸಂದೇಶ 

ಬೆಂಗಳೂರು: ಸಚಿವ ಸಂಪುಟದಲ್ಲಿ ಹಿರಿಯರಿಗೆ ಸೂಕ್ತ ಅವಕಾಶ ಸಿಗದಿರುವ ಹಿನ್ನೆಲೆಯಲ್ಲಿ,  ಅತೃಪ್ತ ಶಾಸಕರು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಲು ನಿರ್ಧರಿಸಿದ್ದಾರೆ.

ಈ ವಾರದ ಕೊನೆಯಲ್ಲಿ ರಾಹುಲ್ ಗಾಂಧಿ ಭೇಟಿಗೆ ಶಾಸಕರ ಪ್ಲಾನ್ ಮಾಡಿದ್ದು, ಸಂಪುಟ ರಚನೆಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಆಗ್ರಹಿಸಲಿದ್ದಾರೆ.

ರಾಹುಲ್ ಗಾಂಧಿ ಮುಂದೆ ಈ ಕುರಿತು ಸಮಜಾಯಿಸಿ ಕೇಳಲು ಚಿಂತನೆ ನಡೆಸಿರುವ ಶಾಸಕರು,  ಶನಿವಾರ ಇಲ್ಲವೇ ರವಿವಾರ ರಾಹುಲ್ ಭೇಟಿಗೆ ಅವಕಾಶ ಸಿಗುವ ಸಾಧ್ಯತೆಯಿದೆ.

ರಾಹುಲ್ ಗಾಂಧಿ ಭೇಟಿಯ ಬಳಿಕ ಅತೃಪ್ತರು ಕಾರ್ಯತಂತ್ರ ನಿರ್ಧರಿಸಲಿದ್ದಾರೆನ್ನಲಾಗಿದೆ.

ರಾಹುಲ್ ಭೇಟಿಗೆ ಅತೃಪ್ತರು ಮುಂದಾಗ್ತಿದ್ದಂತೆ ಅತೃಪ್ತರ ಜೊತೆಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಲು ಹೈಕಮಾಂಡ್ ನಿಂದ ಸಂದೇಶ ಬಂದಿದೆ.  ಕೂಡಲೇ , ಡಿಸಿಎಂ ಪರಮೇಶ್ವರ್ ಅತೃಪ್ತ ಶಾಸಕರ ಮುಂದೆ ಮಾತುಕತೆಯ ಪ್ರಸ್ತಾಪ ಮುಂದಿಟ್ಟಿದ್ದಾರೆ.

loader