ಬೆಂಗಳೂರು[ಜು.06]: ರಾಜ್ಯದಲ್ಲಿ ಶಾಸಕರು ಒಬ್ಬರಾದ ಬಳಿಕ ಮತ್ತೊಬ್ಬರಂತೆ ರಾಜೀನಾಮೆ ಸಲ್ಲಿಸುತ್ತಿದ್ದಾರೆ. ಈ ರಾಜೀನಾಮೆ ಪರ್ವ ಒಂದೆಡೆ ದೋಸ್ತಿ ಸರ್ಕಾರ ಪತನಗೊಳ್ಳುವ ಸಂದೇಶ ನೀಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಸರ್ಕಾರ ರಚಿಸುತ್ತಾ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ. ಈ ನಡುವೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಕಿಡಿ ಶಾಸಕರ ರಾಜೀನಾಮೆ ವಿಚಾರವಾಗಿ ಕಿಡಿ ಕಾರಿದ್ದಾರೆ.

\ರಾಜೀನಾಮೆ ನೀಡಲು ಬಂದ ಎರಡನೇ ಟೀಂ: ಆರ್. ಅಶೋಕ್ ಫುಲ್ ಆ್ಯಕ್ಟಿವ್!

ಹೌದು ರಾಜೀನಾಮೆ ನೀಡಿದ ಶಾಸಕರ ನಡೆಗೆ ಆಕ್ರೋಶ ವ್ಯಕ್ತಪಡಿಸಿರುವ ತನ್ವೀರ್ ಸೇಠ್ 'ಸಿದ್ಧಾಂತಗಳನ್ನು ಬಲಿ ಕೊಟ್ಟು ಏನು ಸಾಧಿಸಿಕೊಳ್ಳಲು ಹೊರಟಿದ್ದೀರಿ. ರಾಜೀನಾಮೆ ಕೊಟ್ಟಿರುವ ಶಾಸಕರು ಹೇಡಿಗಳು. ಕೇವಲ ಬಾಯಿ ಮಾತಿಗೆ ಜಾತ್ಯಾತೀತ ಶಕ್ತಿಗಳು ಒಂದಾಗಿವೆ ಎಂದು ಹೇಳುವುದಲ್ಲ. ನಮ್ಮ ನಡುವಿನ ಸಮಸ್ಯೆಗಳು ಏನು ಅಂತ ಚರ್ಚೆ ಮಾಡಬೇಕಿತ್ತು. ಅಂತಹ ಅವಕಾಶವೇ ಸೃಷ್ಟಿಯಾಗಲಿಲ್ಲ. ಎಲ್ಲರಿಗೂ ಅಸಮಾಧಾನ ಇತ್ತು. ಈಗ ಬಹಿರಂಗವಾಗಿದೆ ಅಷ್ಟೆ' ಎಂದಿದ್ದಾರೆ.

ರಾಜೀನಾಮೆ ನೀಡ್ತೇವೆಂದು ಬ್ಲ್ಯಾಕ್‌ಮೇಲ್ ಮಾಡ್ತಿದ್ದಾರೆ, ಅವರನ್ನು ನಂಬಬೇಡಿ: ಸ್ಪೀಕರ್ ಗರಂ!

ಈ ರಾಜೀನಾಮೆಗೆ ವಿರೋಧ ವ್ಯಕ್ತಪಡಿಸಿರುವ ಶಾಸಕ ತನ್ವೀರ್ ಸೇಠ್ 'ಶಾಸಕರು ಬೆದರಿಕೆಗಾಗಿ ರಾಜೀನಾಮೆ ಕೊಡಲು ಮುಂದಾಗಿದ್ದಾರೋ ಅಥವಾ ನಿಜವಾಗ್ಲೂ ರಾಜೀನಾಮೆ ಕೊಡುತ್ತಾರೋ ನೋಡೋಣ. ಆದ್ರೆ ರಾಜೀನಾಮೆಗೆ ನನ್ನ ವಿರೋಧವಿದೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ನಾನು ಮಾರಾಟದ ವಸ್ತು ಅಲ್ಲ. ಈಶ್ವರಪ್ಪ ಅವರು ಹೇಳಿದಂತೆ ಬಿಜೆಪಿ ಕಚೇರಿಗೆ ಹೋಗಿ ಕಸ ಗುಡಿಸಲ್ಲ. ನಾನು ಯಾವಾಗಲೂ ರಾಜ, ರಾಜನಾಗಿಯೇ ಇರುತ್ತೇನೆ' ಎಂದು ಸ್ಪಷ್ಟಪಡಿಸಿದ್ದಾರೆ