ಹ್ಯಾರೀಸ್ ಮಗನ ಗೂಂಡಾಗಿರಿ ಆಯ್ತು ಈಗ ಇನ್ನೊಬ್ಬ ಕಾಂಗ್ರೆಸ್ ಶಾಸಕನ ಗೂಂಡಾಗಿರಿ

news | Thursday, February 22nd, 2018
Suvarna Web Desk
Highlights

ಶಾಸಕ ಹ್ಯಾರೀಸ್ ಮಗ ಆಯ್ತು ಈಗ ಇನ್ನೊಬ್ಬ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ನಡೆದಿದೆ. ಯಶವಂತಪುರ ಕ್ಷೇತ್ರದ ಶಾಸಕ ಸೋಮಶೇಖರ್​ ಅಧಿಕಾರದ ದರ್ಪ ತೋರಿದ್ದಾರೆ. 

ಬೆಂಗಳೂರು (ಫೆ.21): ಶಾಸಕ ಹ್ಯಾರೀಸ್ ಮಗ ಆಯ್ತು ಈಗ ಇನ್ನೊಬ್ಬ ಕಾಂಗ್ರೆಸ್ ಶಾಸಕರ ಗೂಂಡಾಗಿರಿ ನಡೆದಿದೆ. ಯಶವಂತಪುರ ಕ್ಷೇತ್ರದ ಶಾಸಕ ಸೋಮಶೇಖರ್​ ಅಧಿಕಾರದ ದರ್ಪ ತೋರಿದ್ದಾರೆ. 

ಕಾಂಗ್ರೆಸ್ ಸಮಾವೇಶಕ್ಕೆ ಜಾಗ ನೀಡದ ಪುಟ್ಟರಾಜು ಎಂಬುವರ ಕೆಲಸಗಾರ ಪ್ರಕಾಶ್ ಮೇಲೆ  ಕಾಂಗ್ರೆಸ್ ಶಾಸಕ ಸೋಮಶೇಖರ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ. ಲಾಂಗು-ಮಚ್ಚು, ದೊಣ್ಣೆ, ಕಲ್ಲುಗಳಿಂದ ಅಟ್ಟಾಡಿಸಿ ಪ್ರಕಾಶ್ ಎಂಬುವವರ ಮೇಲೆ ಸೋಮಶೇಖರ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. 

ಫೆ.18ರಂದು ತಿಗರಳರಪಾಳ್ಯದಲ್ಲಿ ಕಾಂಗ್ರೆಸ್​ ಸಮಾವೇಶವಿತ್ತು.  ಪುಟ್ಟರಾಜು ಎಂಬುವರ ಬಳಿ ಸೋಮಶೇಖರ್ 4 ಎಕರೆ ಖಾಲಿ ಜಾಗ ಕೇಳಿದ್ದರು.   ಖಾಲಿ ಜಾಗಕ್ಕೆ ಕಾಂಪೌಂಡ್ ಹಾಕಿದ್ದರಿಂದ ಪುಟ್ಟರಾಜು ಕೊಡಲು ನಿರಾಕರಿಸಿದ್ದರು. 
ಶಾಸಕ ಸೋಮಶೇಖರ್​ಗೂ, ಪುಟ್ಟರಾಜುಗೂ ಆಗಾಗ ಜಗಳ ನಡೆಯುತ್ತಿತ್ತು.  ಪುಟ್ಟರಾಜು ಖಾಲಿ ಜಮೀನಿನಲ್ಲಿದ್ದ ರಸ್ತೆ ಬಿಡುವಂತೆ ಶಾಸಕರ ಬೆಂಬಲಿಗರು ಒತ್ತಾಯಪಡಿಸುತ್ತಿದ್ದರು. ಆಗಾಗ ಖಾಲಿ ಜಾಗಕ್ಕೆ ಹಾಕಲಾಗಿದ್ದ ಕಂಪೌಂಡ್​ ಕೆಡವಿ ತೊಂದರೆ ನೀಡುತ್ತಿದ್ದರು.  ಇದೇ ದ್ವೇಷದ ಹಿನ್ನೆಲೆಯಲ್ಲಿ ಪುಟ್ಟರಾಜು ಕೆಲಸಗಾರ ಪ್ರಕಾಶ್​ ಮೇಲೆ ಹಲ್ಲೆ ಸೋಮಶೇಖರ್ ಬೆಂಬಲಿಗರು ಗೂಂಡಾಗಿರಿ ತೋರಿಸಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕಾಶ್​, ಚಿಕ್ಕಣ್ಣ, ಮಹೇಶ್​ ಮತ್ತು ಜೋಗಣ್ಣಗೌಡ ಮೇಲೆ ಕೂಡಾ ಹಲ್ಲೆ ನಡೆದಿದೆ. 

Comments 0
Add Comment

  Related Posts

  Ex Mla Refuse Congress Ticket

  video | Friday, April 13th, 2018

  BJP MLA Video Viral

  video | Friday, April 13th, 2018

  Kaduru MLA YSV Datta taken class by JDS activists

  video | Thursday, April 12th, 2018

  EX MLA Honey trap Story

  video | Thursday, April 12th, 2018

  Ex Mla Refuse Congress Ticket

  video | Friday, April 13th, 2018
  Suvarna Web Desk