ಬೆಂಗಳೂರು, [ಸೆ.13]: ಅಕ್ರಮ ಗಣಿಗಾರಿಕೆ ಪ್ರಕರಣವೊಂದರಲ್ಲಿ ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ. ನಾಗೇಂದ್ರ ಹಾಗೂ ಅನರ್ಹ ಶಾಸಕ ಆನಂದ್ ಸಿಂಗ್ ಆರೋಪ ಮುಕ್ತರಾಗಿದ್ದರೆ.

ಪ್ರಕರಣ ಖುಲಾಸೆಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು [ಶುಕ್ರವಾರ ಆದೇಶ ಹೊರಡಿಸಿದೆ. ಇದರಿಂದ ನಾಗೇಂದ್ರ ಹಾಗೂ ಆನಂದ್ ಸಿಂಗ್ ಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.

ಕೈ ಶಾಸಕ ನಾಗೇಂದ್ರ ಪೊಲೀಸ್‌ ವಶಕ್ಕೆ

2009-10ರ ಸಾಲಿನಲ್ಲಿ ಪರವಾನಿಗೆ ಪಡೆಯದೆ ಅಕ್ರಮ ಗಣಿಗಾರಿಕೆ ಮಾಡಿ ಸುಮಾರು 50 ಸಾವಿರ ಮೆಟ್ರಿಕ್ ಟನ್‌ನಷ್ಟು ಅಧಿರನ್ನು ಬೇಲಿಕೆರೆ ಬಂದರ್‌ನ ಮುಖಾಂತರ ರಫ್ತು ಮಾಡಿದ್ದಾರೆ. 

ಇದರಿಂದ ರಾಜ್ಯದ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ನಷ್ಟ  ಮಾಡಿರುವ ಆರೋಪ ಇಬ್ಬರು ಶಾಸಕರ ಮೇಲೆ ಇತ್ತು. ಆದ್ರೆ, ಸಾಕ್ಷ್ಯಾಧಾರ ಕೊರತೆಯಿಂದ ಪ್ರಕರಣ ಖುಲಾಸೆಗೊಳಿಸಿ ನ್ಯಾಯಧೀಶ ರಾಮಚಂದ್ರ ಡಿ ಹುದ್ದಾರ್ ಆದೇಶಿಸಿದ್ದಾರೆ.

ಇದೇ ಪ್ರಕರಣದಲ್ಲಿ ವಾರೆಂಟ್ ಜಾರಿ ಮಾಡಿದ್ದರೂ  ಕಾಂಗ್ರೆಸ್‌ ಶಾಸಕ ಬಿ. ನಾಗೇಂದ್ರ ವಿಚಾರಣೆಗೆ ಗೈರಾಗಿದ್ದರು. ಆದ್ದರಿಂದ ಜುಲೈ 2ರಂದು  ಐದೂವರೆ ಗಂಟೆಗಳ ಕಾಲ ಪೊಲೀಸ್‌ ವಶಕ್ಕೆ ನೀಡಿ, ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಬಂಧಮುಕ್ತಗೊಳಿಸಿತು.