ಮತ್ತೊಬ್ಬ ಪ್ರಬಲ ಹಿರಿಯ ನಾಯಕ, 6 ಬಾರಿಯ ಶಾಸಕ ಕಾಂಗ್ರೆಸ್'ಗೆ ಗುಡ್'ಬೈ ! ಚುನಾವಣೆಯಲ್ಲಿ 'ಕೈ'ಗೆ ದೊಡ್ಡ ಹೊಡೆತ

First Published 26, Mar 2018, 9:12 PM IST
Congress MLA Malikayya Guttedhar May Join BJP
Highlights

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತಿಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು, ಸಚಿವ ಸಂಪುಟ ಸೇರದಂತೆ ಸಿಎಂ ಮೇಲೆ ಖರ್ಗೆ ಒತ್ತಡ ಹೇರಿದ್ದಾರೆ ಅನ್ನೋ ಆರೋಪ ಹೊರಿಸಿದ್ದಾರೆ.

ಕಲ್ಬುರ್ಗಿ(ಮಾ.26): ಉತ್ತರ ಕರ್ನಾಟಕದ ಪ್ರಬಲ ಮುಖಂಡ, ಕಾಂಗ್ರೆಸ್ ಶಾಸಕ ಮಾಲಿಕಯ್ಯ ಗುತ್ತೇದಾರ್ ಪಕ್ಷಕ್ಕೆ ಗುಡ್'ಬೈ ಹೇಳಲಿದ್ದಾರೆ.

ರಾಜ್ಯನಾಯಕರ ಧೋರಣೆಗೆ ಬೇಸತ್ತು ಬಿಜೆಪಿಯತ್ತ ಚಿತ್ತ ನೆಟ್ಟಿದ್ದಾರೆ ಎನ್ನಲಾಗಿದೆ. ನೀಡಿದ ಭರವಸೆಗಳನ್ನು ಈಡೇರಿಸದ ಕೈ ನಾಯಕರ ಧೋರಣೆಗೆ ಗುತ್ತೇದಾರ್ ಬೇಸರಗೊಂಡಿದ್ದಾರೆ. ಮಾತುಕತೆಗೂ ಕರೆಯದೇ ನಿರ್ಲಕ್ಷಿಸಿದ ಸಿಎಂ ಸಿದ್ದರಾಮಯ್ಯ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದು ರಾಜ್ಯ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ' ಎನ್ನಲಾಗಿದೆ.

ಕಲ್ಬುರ್ಗಿಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ಮಾತಿಗೆ ಮಾತ್ರ ಮಾನ್ಯತೆ ಸಿಗುತ್ತಿದ್ದು, ಸಚಿವ ಸಂಪುಟ ಸೇರದಂತೆ ಸಿಎಂ ಮೇಲೆ ಖರ್ಗೆ ಒತ್ತಡ ಹೇರಿದ್ದಾರೆ ಅನ್ನೋ ಆರೋಪ ಹೊರಿಸಿದ್ದಾರೆ. ಈಡಿಗ ಸಮುದಾಯಕ್ಕೆ ಸೇರಿರುವ ಇವರು ಅಫ್ಜಲ್'ಪುರ ಕ್ಷೇತ್ರದಿಂದ 6 ಬಾರಿ ಶಾಸಕರಾಗಿದ್ದಾರೆ. ಯಾದಗಿರಿ, ಕಲ್ಬುರ್ಗಿ ಜಿಲ್ಲೆಯಲ್ಲಿ ಹೆಚ್ಚು ಹಿಡಿತ ಹೊಂದಿದ್ದು ಬಿಜೆಪಿ ಸೇರ್ಪಡೆಯಾದರೆ ರಾಜಕೀಯವಾಗಿ ಅನುಕೂಲವಾಗುವ ಸಾಧ್ಯತೆಯಿದೆ.

 

loader