ಕಾಂಗ್ರೆಸ್’ಗೆ ಬೈ ಹೇಳಲು ಗುತ್ತೇದಾರ್ ಸಿದ್ಧತೆ; ಸಿಎಂ ಮನವಿಗೂ ಕ್ಯಾರೇ ಎನ್ನದೇ ಖಡಕ್ ತಿರುಗೇಟು

Congress MLA Guttedar leave Congress
Highlights

ಕಾಂಗ್ರೆಸ್ ವಿರುದ್ಧ  ಗುತ್ತೇದಾರ್ ಸಿಡಿದೆದ್ದಿದ್ದು  ಕಾಂಗ್ರೆಸ್’ಗೆ  ಬೈಬೈ ಹೇಳಲು  ಸಿದ್ಧತೆ ನಡೆಸಿದ್ದಾರೆ.  ಇಂದು CM ಸಿದ್ದರಾಮಯ್ಯ ಭೇಟಿಯಾಗಿ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಬೆಂಗಳೂರು (ಮಾ. 29): ಕಾಂಗ್ರೆಸ್ ವಿರುದ್ಧ  ಗುತ್ತೇದಾರ್ ಸಿಡಿದೆದ್ದಿದ್ದು  ಕಾಂಗ್ರೆಸ್’ಗೆ  ಬೈಬೈ ಹೇಳಲು  ಸಿದ್ಧತೆ ನಡೆಸಿದ್ದಾರೆ.  ಇಂದು CM ಸಿದ್ದರಾಮಯ್ಯ ಭೇಟಿಯಾಗಿ ಬಳಿಕ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 

ಸಿದ್ದರಾಮಯ್ಯ ಮಾತಿಗೆ ಗೌರವ ಕೊಟ್ಟು ಈವರೆಗೂ ಕಾಂಗ್ರೆಸ್’ನಲ್ಲಿ  ಕೆಲಸ ಮಾಡಿದ್ದೇನೆ.  ಸೂಕ್ತ ಸ್ಥಾನ ಸಿಗದಿರುವ ಹಿನ್ನೆಲೆಯಲ್ಲಿ ಈಗ ಕಾಂಗ್ರೆಸ್ ತ್ಯಜಿಸಲು ನಿರ್ಧಾರ ಮಾಡಿದ್ದೇನೆ.  3 ಬಾರಿ ಮಂತ್ರಿ ಸ್ಥಾನ ಅವಕಾಶ ನಿರಾಕರಿಸಿದ್ದಕ್ಕೆ ಕಾಂಗ್ರೆಸ್ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಅಪಾರ ಅಭಿಮಾನ ಇದೆ.  ಆದರೆ ಕಾಂಗ್ರೆಸ್’ನಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆ  ಬಂದಿದ್ದರಿಂದ ಪಕ್ಷಕ್ಕೆ ಗುಡ್ ಬೈ ಹೇಳುತ್ತಿದ್ದೇನೆ ಎಂದಿದ್ದಾರೆ.  ಸದ್ಯದಲ್ಲೇ ಬಿಜೆಪಿ, 

ಮಾಲೀಕಯ್ಯ ಗುತ್ತೇದಾರ್  ಮನವೊಲಿಸಲು ಸ್ವತಃ ಸಿಎಂ ಸಿದ್ರಾಮಯ್ಯ ಮುಂದಾಗಿದ್ದಾರೆ.  ಕರೆ ಮಾಡಿ ಪಕ್ಷ ಬಿಡದಂತೆ ಮನವಿ ಮಾಡಿಕೊಂಡಿದ್ದಾರೆ. ಸಿಎಂ ಮನವಿಗೂ  ಶಾಸಕ ಮಾಲೀಕಯ್ಯ ಗುತ್ತೇದಾರ ಸೊಪ್ಪು ಹಾಕಿಲ್ಲ.  ಹಿಂದುಳಿದ ವರ್ಗದ ವ್ಯಕ್ತಿಯ ಸಿಎಂ ಸ್ಥಾನಕ್ಕೆ ಧಕ್ಕೆ ತರಬಾರದೆಂದು ಸುಮ್ಮನಿದ್ದೆ.  ಪಕ್ಷದ ಹಿರಿಯ ನಾಯಕರು ನನ್ನನ್ನು ತುಳಿಯುತ್ತಲೇ ಇದ್ರೂ ನೀವು ತಲೆಕೆಡಿಸಿಕೊಂಡಿಲ್ಲ.  ನಿಮ್ಮ ಸಿಎಂ ಅವಧಿ ಮುಗಿದಿದೆ. ಈಗ ನನ್ನ ಭವಿಷ್ಯ ನೋಡಿಕೊಳ್ಳಲು ನನಗೆ ಬಿಡಿ ಸಿಎಂ ಸಿದ್ರಾಮಯ್ಯ ಗೆ ನೇರ ಖಡಕ್ ತಿರುಗೇಟು ನೀಡಿದ್ದಾರೆ ಮಾಲೀಕಯ್ಯ ಗುತ್ತೇದಾರ್.  

loader