ಕಾಂಗ್ರೆಸ್'ನವರಿಗೆ ಮಾತ್ರ ಸಾಲ ಹಂಚೋ ಸಮಾವೇಶ ಮಾಡುತ್ತೇನೆ. ಒಂದು ಸಾಲ ಕೊಡೋ ಸಮಾವೇಶ ಮಾಡುತ್ತೇನೆ.  ಸಾಲ ತೆಗೆದುಕೊಂಡವರು ಕಾಂಗ್ರೆಸ್'ಗೆ ವೋಟ್ ಹಾಕಬೇಕು.‌ ಅಂತಹವರು ಮಾತ್ರ ಸಾಲಕ್ಕೆ ಅರ್ಜಿ ಹಾಕಿ ಬೇರೆಯವರು ಹಾಕಬೇಡಿ. ನನ್ನ ಕ್ಷೇತ್ರದವರಿಗೂ ನಾನು ಹೀಗೆ ಹೇಳುತ್ತೇನೆ ಎಂದು ಕೊರಟಗೆರೆ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ತುಮಕೂರು (ಡಿ.17): ಕಾಂಗ್ರೆಸ್'ನವರಿಗೆ ಮಾತ್ರ ಸಾಲ ಹಂಚೋ ಸಮಾವೇಶ ಮಾಡುತ್ತೇನೆ. ಒಂದು ಸಾಲ ಕೊಡೋ ಸಮಾವೇಶ ಮಾಡುತ್ತೇನೆ. ಸಾಲ ತೆಗೆದುಕೊಂಡವರು ಕಾಂಗ್ರೆಸ್'ಗೆ ವೋಟ್ ಹಾಕಬೇಕು.‌ ಅಂತಹವರು ಮಾತ್ರ ಸಾಲಕ್ಕೆ ಅರ್ಜಿ ಹಾಕಿ ಬೇರೆಯವರು ಹಾಕಬೇಡಿ. ನನ್ನ ಕ್ಷೇತ್ರದವರಿಗೂ ನಾನು ಹೀಗೆ ಹೇಳುತ್ತೇನೆ ಎಂದು ಕೊರಟಗೆರೆ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.

ಸಾಲ ತೆಗೆದುಕೊಂಡು ನನಗೇ ವೋಟ್ ಹಾಕಬೇಕು ಅಂತ ನನ್ನ ಕ್ಷೇತ್ರದ ಜನತೆಗೆ ಹೇಳುತ್ತೇನೆ. ಈಗ ಸಾಲ ತೆಗೆದುಕೊಳ್ಳಿ. ಮತ್ತೇ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಾಲ ಮನ್ನವಾಗುತ್ತದೆ. ಸಾಲ ಹಂಚೋ ಸಮಾವೇಶ ಮಾಡುತ್ತೇವೆ. ಕಾಂಗ್ರೆಸ್'ನವರು ಬಿಟ್ಟು ಬೇರೆ ಯಾರೂ ಬರಬೇಡಿ. ಕಾಂಗ್ರೆಸ್'ಗೆ ವೋಟ್ ಹಾಕುವವರು ಮಾತ್ರ ಸಾಲ ಹಂಚುವ ಸಮಾವೇಶಕ್ಕೆ ಬನ್ನಿ ಎಂದು ವಿವಾದಾತ್ಮಕವಾಗಿ ಶಾಸಕ ರಾಜಣ್ಣ ಹೇಳಿದ್ದಾರೆ.