Asianet Suvarna News Asianet Suvarna News

ಲೋಕಸಭಾ ಚುನಾವಣೆ : ಖರ್ಗೆ ವಿರುದ್ಧ ಕಾಂಗ್ರೆಸ್ ಶಾಸಕ ಸ್ಪರ್ಧೆ? ಏನಿದು ಮಸಲತ್ತು?

ಯಾವುದೇ ಕಾರಣಕ್ಕೂ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರು ಗೆಲ್ಲದಂತೆ ನೋಡಿಕೊಳ್ಳಬೇಕು ಎಂಬ ಫರ್ಮಾನು ಬಿಜೆಪಿ ರಾಷ್ಟ್ರೀಯ ನಾಯಕರಿಂದ ರಾಜ್ಯ ನಾಯಕರಿಗೆ ರವಾನೆಯಾಗಿದೆ. ಇದರಿಂದ ಕಾಂಗ್ರೆಸ್ ಶಾಸಕನನ್ನು ಸೆಳೆದು ಬಿಜೆಪಿಯಿಂದ ಸ್ಪರ್ಧೆಗೆ ಅವಕಾಶ ಕೊಡಲು ಯತ್ನ ನಡೆಯುತ್ತಿವೆ. 

Congress MLA Contest Against Mallikarjun Kharge
Author
Bengaluru, First Published Oct 1, 2018, 8:10 AM IST

ಬೆಂಗಳೂರು :  ಕಾಂಗ್ರೆಸ್ ಶಾಸಕ ಡಾ.ಉಮೇಶ್ ಜಾಧವ್ ಅವರನ್ನು ಕಲಬುರ್ಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿಸುವ ಸಂಬಂಧ ತೆರೆಮರೆಯಲ್ಲಿ ಕಸರತ್ತು ನಡೆದಿದೆ. ಆರ್‌ಎಸ್‌ಎಸ್ ಮುಖಂಡರೂ ಈ  ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದಾರೆ. ಈಗಾಗಲೇ ಒಂದೆರಡು ಸುತ್ತಿನ ಮಾತುಕತೆಯೂ ನಡೆದಿದ್ದು, ಜಾಧವ್ ಅವರು ಅಂತಿಮ ನಿರ್ಧಾರ ತಿಳಿಸುವುದು ಬಾಕಿ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯಾವುದೇ ಕಾರಣಕ್ಕೂ ಈ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರು ಗೆಲ್ಲದಂತೆ ನೋಡಿಕೊಳ್ಳಬೇಕು ಎಂಬ ಫರ್ಮಾನು ಬಿಜೆಪಿ ರಾಷ್ಟ್ರೀಯ ನಾಯಕರಿಂದ ರಾಜ್ಯ ನಾಯಕರಿಗೆ ರವಾನೆಯಾಗಿದೆ. ಅಲ್ಲದೆ, ಸಮಾಜದಲ್ಲಿ ಉತ್ತಮ ಹೆಸರುಳ್ಳ ಹಾಗೂ ಅದೇ ಭಾಗಕ್ಕೆ ಸೇರಿದ ಮುಖಂಡರು ಯಾವುದೇ ಪಕ್ಷದಲ್ಲಿದ್ದರೂ ಕರೆತಂದು ಕಣಕ್ಕಿಳಿಸಲು ಪ್ರಯತ್ನಿಸಿ ಎಂಬ ನಿರ್ದೇಶನವನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ.

"

ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯಲ್ಲಿ ಆ ಭಾಗದಲ್ಲಿ ಖರ್ಗೆ ಅವರನ್ನು ಎದುರಿಸಬಲ್ಲ ಸಮರ್ಥ ಅಭ್ಯರ್ಥಿಗಳ ಕೊರತೆ ಎದ್ದು ಕಾಣುತ್ತಿದೆ. ಜಾತಿ ಸಮೀಕರಣದ ಹಿನ್ನೆಲೆಯಲ್ಲಿ ಆ ಕ್ಷೇತ್ರದಿಂದ ಬಂಜಾರ ಸಮುದಾಯದವರನ್ನೇ ಕಣಕ್ಕಿಳಿಸಿದರೆ ಖರ್ಗೆ ಅವರಿಗೆ ಬಲವಾದ ಪೈಪೋಟಿ ಒಡ್ಡಬಹುದು ಎಂಬುದು ಬಿಜೆಪಿ ವರಿಷ್ಠರ ಲೆಕ್ಕಾಚಾರ. 

ಪರಿಶಿಷ್ಟ ಜಾತಿ ಮೀಸಲು ಲೋಕಸಭಾ ಕ್ಷೇತ್ರವಾಗಿರುವ ಬಂಜಾರ ಸಮುದಾಯದ ರೇವೂನಾಯಕ್ ಬೆಳಮಗಿ ಅವರು ಪಕ್ಷ ತ್ಯಜಿಸಿದ ನಂತರ ಆ ಸಮುದಾಯದಲ್ಲಿ ಮತ್ತೊಬ್ಬ ಪ್ರಭಾವಿ ಮುಖಂಡ ಬಿಜೆಪಿಯಲ್ಲಿ ಇಲ್ಲ ದಂತಾಗಿದೆ. ಖರ್ಗೆ ಬಲಗೈ ಪಂಗಡಕ್ಕೆ ಸೇರಿದವರು. ಹೀಗಾಗಿ ಬಲಗೈ ಪಂಗಡಕ್ಕೆ ಸೇರಿದವರನ್ನು ಕಣಕ್ಕಿಳಿಸಿದರೆ ಪ್ರಯೋಜನವಿಲ್ಲ. ಎಡಗೈ ಪಂಗಡಕ್ಕೆ ಸೇರಿದ ಮುಖಂ ಡರು ಬಿಜೆಪಿಯಲ್ಲಿದ್ದರೂ ರಾಜಕೀಯ ದೃಷ್ಟಿಯಿಂದ ಅವರನ್ನು ಕಣಕ್ಕಿಳಿಸಲು ಬಿಜೆಪಿ ವರಿಷ್ಠರು ಹಿಂದೇಟು ಹಾಕುತ್ತಿದ್ದಾರೆ. ಅವರ ಪ್ರಕಾರ ಆ ಕ್ಷೇತ್ರದಲ್ಲಿನ ಪ್ರಬಲ ಲಿಂಗಾಯತ ಮತ್ತು ಬಂಜಾರ ಸಮುದಾಯದ ಮತ ಗಳನ್ನು ಕ್ರೋಢೀಕರಿಸಿದಲ್ಲಿ ಗೆಲುವು ಸುಲಭವಾಗುತ್ತದೆ.

ಜತೆಗೆ ಪರಿಶಿಷ್ಟ ಜಾತಿಯ ಎಡಗೈ ಪಂಗಡದ ಮತದಾರರೂ ಬಿಜೆಪಿಯನ್ನು ಬೆಂಬಲಿಸಲಿದ್ದಾರೆ ಎಂಬ ನಿರೀಕ್ಷೆ ಹೊಂದಿ ದ್ದಾರೆ. ಈ ಕಾರಣಕ್ಕಾಗಿ ವೃತ್ತಿಯಿಂದ ವೈದ್ಯರಾಗಿರುವ ಉಮೇಶ್ ಜಾಧವ್ ಅವರನ್ನು ಗುರುತಿಸಲಾಗಿದೆ. ಜಾಧ ವ್ ಅವರು ಚಿಂಚೋಳಿ ಕ್ಷೇತ್ರದ ಶಾಸಕರು. ಬಂಜಾರ ಸಮುದಾಯದಲ್ಲಿ ಪ್ರಭಾವ ಹೊಂದಿದ್ದಾರೆ. ಇತರೆ ಸಮು ದಾಯಗಳೊಂದಿಗೆ ಉತ್ತಮ ಬಾಂಧವ್ಯ ಗಳಿಸಿದ್ದಾರೆ. ಚಿಂಚೋಳಿ ತಾಲೂಕು ಕಲಬುರ್ಗಿ ಜಿಲ್ಲೆಯಲ್ಲಿದ್ದರೂ ಬೀದರ್ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ.

ಆದರೆ, ಜಾಧವ್ ಅವರ ಸಂಪರ್ಕ ಕಲಬುರ್ಗಿ ಲೋಕ ಸಭಾ ಕ್ಷೇತ್ರದಾದ್ಯಂತ ಚೆನ್ನಾಗಿ ಇರುವುದರಿಂದ ಅವರನ್ನೇ ಕರೆತಂದು ಅಭ್ಯರ್ಥಿಯನ್ನಾಗಿಸುವ ಪ್ರಯತ್ನ ನಡೆದಿದೆ. ಖರ್ಗೆ ಎದುರಿಸಲು ಜಾಧವ್ ಉತ್ತಮ ಅಭ್ಯರ್ಥಿಯಾ ಗಬಹುದು ಎಂಬುದನ್ನು ಬಿಜೆಪಿ ರಾಷ್ಟ್ರೀಯ ನಾಯಕರೇ ಮಾಹಿತಿ ತರಿಸಿಕೊಂಡಿದ್ದಾರೆ. ಜಾಧವ್ ಅವರ ವಿವರವನ್ನು ಗಮನಿಸಿದ ನಂತರ ಅವರೊಂದಿಗೆ ಮಾತುಕತೆ ನಡೆಸಿ ರಾಜ್ಯ ನಾಯಕರಿಗೆ ಸೂಚನೆ ರವಾನಿಸಿದ್ದರು. ಆ ಪ್ರಕಾರ ರಾಜ್ಯ ನಾಯಕರು ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. 

Follow Us:
Download App:
  • android
  • ios