ಬೆಂಗ​ಳೂರು :  ಚಿಕ್ಕ​ಬ​ಳ್ಳಾ​ಪುರ ಕಾಂಗ್ರೆಸ್‌ ಶಾಸಕ ಹಾಗೂ ಸಚಿವ ಸ್ಥಾನದ ಆಕಾಂಕ್ಷಿ ಡಾ. ಸುಧಾ​ಕರ್‌ ಅವ​ರು ಬೆನ್ನು​ಹುರಿ ಸಮಸ್ಯೆ ಹಿನ್ನೆ​ಲೆ​ಯಲ್ಲಿ ನಗ​ರದ ಜಿಂದಾಲ್‌ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ದಾಖ​ಲಾ​ಗಿದ್ದಾರೆ.

ಸುಧಾ​ಕರ್‌ ಅವರು ಸೋಮ​ವಾರ ಜಿಂದಾ​ಲ್‌​ನಲ್ಲಿ ಬಿಜೆ​ಪಿಯ ಮಾಜಿ ಸಚಿವ ಜನಾ​ರ್ದನ ರೆಡ್ಡಿ ಅವ​ರನ್ನು ಭೇಟಿ ಮಾಡಿ​ದ್ದರು ಎಂಬ ವದಂತಿ​ಗ​ಳಿ​ದ್ದವು. 

ಆದ​ರೆ ಈ ವದಂತಿ​ಯನ್ನು ಅಲ್ಲ​ಗ​ಳೆ​ದಿ​ರುವ ಸುಧಾ​ಕರ್‌ ಅವರು ಬೆನ್ನು​ಹುರಿ ಸಮ​ಸ್ಯೆ​ಯಿಂದ ಕಳೆದ ಕೆಲ ದಿನ​ಗ​ಳಿಂದ ತಾವು ಜಿಂದಾ​ಲ್‌ಗೆ ದಾಖ​ಲಾ​ಗಿದ್ದು, ಚಿಕಿ​ತ್ಸೆ ಪಡೆ​ಯು​ತ್ತಿ​ದ್ದೇನೆ. ನಾನು ಯಾರನ್ನೂ ಭೇಟಿ​ಯಾ​ಗಿಲ್ಲ. ನಾನು ರೆಡ್ಡಿ ಅವ​ರನ್ನು ಭೇಟಿ​ಯಾ​ಗಿ​ದ್ದೇನೆ ಎಂಬುದು ಅಪ್ಪಟ ಸುಳ್ಳು ಎಂದು ಸ್ಪಷ್ಟ​ಪ​ಡಿ​ಸಿ​ದ​ರು.