ಬೆಂಗಳೂರು [ಜೂ.15] : ಲೋಕಸಭಾ ಚುನಾವಣೆ ಬಳಿಕ ಮಂತ್ರಿ ಮಾಡುವುದಾಗಿ ಮಾತು ಕೊಟ್ಟು ಕೈಕೊಟ್ಟಿದ್ದಾರೆ ಎಂದು ಹಿರೇಕೆರೂರು ಶಾಸಕ ಬಿ.ಸಿ.ಪಾಟೀಲ ಅವರು ಕಾಂಗ್ರೆಸ್ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಇದು ಕಾಂಗ್ರೆಸ್ ಪಕ್ಷ. ಧ್ವನಿ ಇದ್ದವರು ಇಲ್ಲಿ ಬೇಕಾಗಿಲ್ಲ. ಪಕ್ಷ ಉಳಿಯಬೇಕು, ಬೆಳೆಯಬೇಕು ಎಂಬುವುದು ಇಲ್ಲ, ಸರ್ಕಾರ ಉಳಿದು ತಾವು ಚೆನ್ನಾಗಿದ್ದರೆ ಸಾಕು ಎಂಬ ಸ್ಥಿತಿಯಲ್ಲಿ ನಾಯಕರಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ಎಲ್ಲರೂ ಮಾತು ತಪ್ಪಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. 

ಲೋಕಸಭೆ ಚುನಾವಣೆ ಬಳಿಕ ಮಂತ್ರಿ ಸ್ಥಾನ ಕೊಡುವುದಾಗಿ ಪ್ರಾಮಿಸ್ ಮಾಡಿ ಕೈಕೊಟ್ಟಿದ್ದಾರೆ. ಮುಂದೇನು, ಕಾದು ನೋಡೋಣ ಎಂದರು.