ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಸಂಬಂಧಿ ಮತ್ತು ಹಾಲಿ ಶಾಸಕಿ ಆಶಾ ಕುಮಾರಿ ಅವರು ತಮ್ಮ ಕಪಾಳಕ್ಕೆ ಹೊಡೆದಿದ್ದರಿಂದ ಕುಪಿತಳಾದ ಮಹಿಳಾ ಪೊಲೀಸ್ ಪೇದೆಯೊಬ್ಬರು, ಶಾಸಕಿಗೆ 2 ಬಾರಿ ಕಪಾಳ ಮೋಕ್ಷ ಮಾಡಿ ಸೇಡು ತೀರಿಸಿಕೊಂಡ ಘಟನೆ ರಾಜ್ಯ ಕಾಂಗ್ರೆಸ್ ಕಚೇರಿ ಮುಂದೆ ನಡೆದಿದೆ.

ಶಿಮ್ಲಾ: ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಸಂಬಂಧಿ ಮತ್ತು ಹಾಲಿ ಶಾಸಕಿ ಆಶಾ ಕುಮಾರಿ ಅವರು ತಮ್ಮ ಕಪಾಳಕ್ಕೆ ಹೊಡೆದಿದ್ದರಿಂದ ಕುಪಿತಳಾದ ಮಹಿಳಾ ಪೊಲೀಸ್ ಪೇದೆಯೊಬ್ಬರು, ಶಾಸಕಿಗೆ 2 ಬಾರಿ ಕಪಾಳ ಮೋಕ್ಷ ಮಾಡಿ ಸೇಡು ತೀರಿಸಿಕೊಂಡ ಘಟನೆ ರಾಜ್ಯ ಕಾಂಗ್ರೆಸ್ ಕಚೇರಿ ಮುಂದೆ ನಡೆದಿದೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವೇನು ಎಂಬುದರ ಕುರಿತು ಪರಾಜಿತ ಶಾಸಕರೊಂದಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಮಾಲೋಚನೆ ನಡೆಸುತ್ತಿದ್ದರು.

ಅಜ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಶಾಸಕಿ ಆಶಾ ಅವರನ್ನು ಪೊಲೀಸರು ತಡೆಯಲು ಯತ್ನಿಸಿದರು. ಇದರಿಂದ ಕ್ರೋಧ ಗೊಂಡ ಆಶಾ, ಮಹಿಳಾ ಪೊಲೀಸ್ ಪೇದೆಯ ಕಪಾಳಕ್ಕೆ ಬಾರಿಸಿದರು. ಈ ವೇಳೆ ಕೊಂಚವೂ ದಿಗಿಲು ಗೊಳ್ಳದ ಪೇದೆ, ಶಾಸಕಿಯ ಕಪಾಳಕ್ಕೆ ತಿರುಗಿಸಿ ಎರಡೇಟು ಹೊಡೆದರು. ಆಶಾ ವರ್ತನೆಯನ್ನು ಬಳಿಕ ರಾಹುಲ್ ಕೂಡ ಖಂಡಿಸಿ ತರಾಟೆಗೆ ತೆಗೆದುಕೊಂಡರೆನ್ನಲಾಗಿದೆ. ಸದ್ಯ ಬಡಿದಾಡಿಕೊಂಡ ಶಾಸಕಿ ಹಾಗೂ ಪೊಲೀಸ್ ಪೇದೆ ಮೇಲೂ ಎಫ್ಐಆರ್ ದಾಖಲು ಮಾಡಲಾಗಿದೆ.