ಪ್ರತಾಪ್ ಸಿಂಹ ಮಾತಿಗೆ ಕಾಂಗ್ರೆಸಿಗರು ಗರಂ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 26, Jul 2018, 10:52 AM IST
Congress Leaders Slams Pratap Simha
Highlights

ಕಾಂಗ್ರೆಸಿಗರು ವಿಷ ಉಣಿಸುತ್ತಿದ್ದಾರೆ ಎಂದು ಹೇಳಿದ ಪ್ರತಾಪ್ ಸಿಂಹ ಹೇಳಿಕೆ ಬಿಜೆಪಿ ಹಾಗೂ ಕಾಂಗ್ರೆಸಿಗರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. 

ನವದೆಹಲಿ: ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇತ್ತೀಚೆಗೆ ಸಮಾರಂಭವೊಂದರಲ್ಲಿ ಕಣ್ಣೀರು ಹಾಕಿ ‘ತಾವು ವಿಷಕಂಠ’ ಎಂದು ಹೇಳಿದ ವಿಷಯ ಲೋಕಸಭೆಯಲ್ಲಿ ಬುಧವಾರ ಪ್ರಸ್ತಾಪವಾಗಿ ಕರ್ನಾಟಕದ ಬಿಜೆಪಿ ಸಂಸದರು ಹಾಗೂ ಕಾಂಗ್ರೆಸ್ ಸಂಸದರ ನಡುವೆ ವಾಗ್ವಾದಕ್ಕೆ ಕಾರಣವಾಯಿತು. 

ಬರಗಾಲ ಕುರಿತ ಚರ್ಚೆಯಲ್ಲಿ ಮಾತನಾಡಿದ ಮೈಸೂರು-ಕೊಡಗು ಸಂಸದ ಪ್ರತಾಪ್‌ಸಿಂಹ, ‘ಕರ್ನಾಟಕ ಮುಖ್ಯಮಂತ್ರಿಗಳು ತಾವು ವಿಷ ಕುಡಿಯುತ್ತಿದ್ದೇವೆ ಎಂದು ಹೇಳಿದ್ದಾರೆ. ಅಧಿಕಾರದಲ್ಲಿ ಉಳಿಯಲು ತಾವು ಹೀಗೆ ಮಾಡುತ್ತಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷ ಹೆಚ್ಚಿನ ಅಧಿಕಾರಕ್ಕೆ ಹಾಗೂ ಸರ್ಕಾರದ ಮೇಲೆ ನಿಯಂತ್ರಣ ಸಾಧಿಸುವುದಕ್ಕೆ ವಿಷ ಉಣಿಸುತ್ತಿದೆ’ ಎಂದರು.

ಪ್ರತಾಪ್ ಈ ಹೇಳಿಕೆ ನೀಡುತ್ತಿದ್ದಂತೆಯೇ ಕರ್ನಾಟಕದ ಕಾಂಗ್ರೆಸ್ ಸಂಸದರು ಹಾಗೂ ಇತರರು ಎದ್ದು ನಿಂತು ಪ್ರತಿಭಟನೆ ವ್ಯಕ್ತಪಡಿಸಿದರು. ಆಗ ಮಧ್ಯಪ್ರವೇಶಿಸಿದ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್, ‘ಪ್ರತಾಪ್ ಅವರು ಯುವ ಸಂಸದರು. ಅವರು ಲೋಕಸಭೆಯಲ್ಲಿ ಮಾತನಾಡುವುದು ಅಪರೂಪ. ಮಾತಾಡಲು ಬಿಡಿ’ ಎಂದರು. 

loader