ಸಚಿವ ಜಮೀರ್ ಅಹಮದ್ ಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರೇ ಸಾಥ್ ನೀಡುತ್ತಿಲ್ಲ.  ಟಿಪ್ಪು ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ಭಿನ್ನಮತ ಹೊರಬಿದ್ದಿದೆ. 

ಬೆಂಗಳೂರು (ನ. 11): ಸಚಿವ ಜಮೀರ್ ಅಹಮದ್ ಗೆ ಕಾಂಗ್ರೆಸ್ ಮುಸ್ಲಿಂ ಮುಖಂಡರೇ ಸಾಥ್ ನೀಡುತ್ತಿಲ್ಲ. ಟಿಪ್ಪು ಜಯಂತಿ ಆಚರಣೆ ವೇಳೆ ಕಾಂಗ್ರೆಸ್ ಮುಸ್ಲಿಂ ನಾಯಕರ ಭಿನ್ನಮತ ಹೊರಬಿದ್ದಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟಿಪ್ಪು ಜಯಂತಿಗೆ ಜಮೀರ್ ಆಹ್ವಾನಕ್ಕೆ ಕಾಂಗ್ರೆಸ್ ಮುಸ್ಲಿಂ ಮುಖಂಡರು ಕಿಂಚಿತ್ತೂ ಬೆಲೆ ಕೊಟ್ಟಿಲ್ಲ. ಟಿಪ್ಪು ಜಯಂತಿಯಲ್ಲಿ ಜಮೀರ್ ಅಹಮದ್ ನನ್ನು ಅಲ್ಪಸಂಖ್ಯಾತ ನಾಯಕರು ಒಂಟಿಯಾಗಿಸಿದ್ದಾರೆ. ಮಾಜಿ ಸಚಿವ ತನ್ವೀರ್ ಸೇಠ್, ಸಿ.ಎಂ ಇಬ್ರಾಹಿಂ, ಸಚಿವ ಯು.ಟಿ ಖಾದರ್ ಟಿಪ್ಪು ಜಯಂತಿಗೆ ಗೈರಾಗಿ ಜಮೀರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

ಹಿರಿಯ ನಾಯಕ ಜಾಫರ್ ಶರೀಫ್ ರೆಹಮಾನ್ ಖಾನ್, ಜಾಫರ್ ಶರೀಫ್, ರೆಹಮಾನ್ ಖಾನ್ ಆಹ್ವಾನ ನೀಡಿದರೂ ಆಗಮಿಸಿಲ್ಲ. ಜಮೀರ್ ವಿರುದ್ಧ ಕಾಂಗ್ರೆಸ್ ಮುಸ್ಲಿಂ ನಾಯಕರ ಅಸಮಾಧಾನ ಕಂಡು ಕೈ ನಾಯಕರಿಗೆ ಟೆನ್ಷನ್ ಶುರುವಾಗಿದೆ.