ಬೆಂಗಳೂರು[ಜು. 14] ರಾಮಲಿಂಗಾರೆಡ್ಡಿ ಈಗಾಗಲೇ ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅವರ ತೀರ್ಮಾನ ಏನು ಎಂಬುದನ್ನು ತಿಳಿಸಿದ್ದಾರೆ. ನಾಳೆ ಸದನಕ್ಕೆ ಬರ್ತಿನಿ ಅಂತ ಹೇಳಿದ್ದಾರೆ. ನಮ್ಮ ನಾಯಕರು ಮಾತುಕತೆ ಮಾಡಿದ್ದು ಈಗ ಎಲ್ಲ ಉಲ್ಟಾ ಆಗಲಿದೆ ಎಂದು  ಶಾಸಕ ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.

ಯಾರ ಯಾರು ನಮ್ಮ ಪರ ಅಂತ ಹೇಳಿದ್ರೆ ಬಿಜೆಪಿ ಅಲರ್ಟ್ ಆಗುತ್ತದೆ. ಹಾಗಾಗಿ ಏನು ಹೇಳಲ್ಲ. ಸರ್ಕಾರ ಸೇಫ್ ಆಗಿದೆ. ಯಾವುದೆ ಸಮಸ್ಯೆ ಇಲ್ಲ ಎಂದು ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಮನೆಗೆ ತೆರಳಿ ಕೊನೆ ಕ್ಷಣದಲ್ಲಿ ರಾಮಲಿಂಗಾ ರೆಡ್ಡಿಗೆ ಬಿಗ್ ಆಫರ್

ಶನಿವಾರ ಇಡೀ ದಿನ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜ್ ಅವರ ಮನವೊಲಿಕೆ ಪ್ರಯತ್ನಗಳು ನಡೆದಿದ್ದವು. ಆದರೆ ಎಂಟಿಬಿ ಭಾನುವಾರ ಬೆಳಗ್ಗೆ ಮುಂಬೈ ವಿಮಾಣ ಏರಿದರು. ಇದಾದ ಮೇಲೆ ರಾಜೀನಾಮೆ ನೀಡಿರುವ ಮತ್ತೊಬ್ಬ ಶಾಸಕ ರಾಮಲಿಂಗಾರೆಡ್ಡಿ ಮನವೊಲಿಕೆ ಯತ್ನ ಮಾಡಲಾಯಿತು.