ವಿಶೇಷ ವಿಮಾನದ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರ ಎದುರೇ ಕರಾವಳಿಯ ಪ್ರಮುಖ ಕೈ ನಾಯಕರಿಬ್ಬರ ಭಿನ್ನಮತ ಸ್ಫೋಟಗೊಂಡಿದೆ.
ಬೆಂಗಳೂರು (ಅ.22): ವಿಶೇಷ ವಿಮಾನದ ಮೂಲಕ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿಎಂ ಸಿದ್ದರಾಮಯ್ಯನವರ ಎದುರೇ ಕರಾವಳಿಯ ಪ್ರಮುಖ ಕೈ ನಾಯಕರಿಬ್ಬರ ಭಿನ್ನಮತ ಸ್ಫೋಟಗೊಂಡಿದೆ.
ವಿಮಾನ ಇಳಿದ ಸಿಎಂ ಪೊಲೀಸ್ ಗೌರವ ಪಡೆದು ಕಾರು ಹತ್ತಲು ಮುಂದಾಗ್ತಾ ಇದ್ದಂತೆ ಸರ್ಕಾರದ ಮುಖ್ಯ ಸಚೇತಕ ಐವಾನ್ ಡಿಸೋಜಾ ಮತ್ತು ಮೂಡಬಿದರೇ ಶಾಸಕ ಅಭಯ ಚಂದ್ರ ಜೈನ್ ಪರಸ್ಪರ ಕಚ್ಚಾಡಿಕೊಂಡಿದ್ದಾರೆ. ಸಿಎಂ ಸ್ವಾಗತಿಸೋಕೆ ನಾ ಮುಂದು, ತಾ ಮುಂದು ಅಂತ ಇಬ್ಬರೂ ಪೈಪೋಟಿಯಲ್ಲಿ ಮುನ್ನುಗ್ಗಿದ್ದಾರೆ. ಈ ವೇಳೆ ಆಕ್ರೋಶಗೊಂಡ ಸಚಿವ ಜೈನ್, ಐವನ್ ಡಿಸೋಜಾರನ್ನ ಕೈಯಿಂದ ತಳ್ಳಿ ಸಿಎಂ ಹತ್ತಿರ ಬರದಂತೆ ತಡೆದಿದ್ದಾರೆ. ಈ ವೇಳೆ ಇಬ್ಬರ ನಡುವೆ ಸಿಎಂ ಎದುರಲ್ಲೇ ಜಟಾಪಟಿ ನಡೆದಿದ್ದು, ಇಬ್ಬರ ಬೆಂಬಲಿಗರು ಕೂಡ ಪರಸ್ಪರ ಕೆಸರೆರಚಾಟ ಕೂಡ ನಡೆಯಿತು.
