ಬೆಂಗಳೂರು : ರಾಹುಲ್ ಗಾಂಧಿ ಪ್ರವಾಸದ ವೇಳೆ ಪ್ರಮುಖ ಕಾಂಗ್ರೆಸ್ ಮುಖಂಡರು ಗೈರಾಗಿರುವ  ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಾಳಯದಲ್ಲಿ ಹತ್ತು ಹಲವು ಚರ್ಚೆ ಮುಂದುವರಿದಿದೆ. ರಮ್ಯಾ, ಅಂಬರೀಶ್​​ ಮತ್ತು ಸಚಿವ ಎಂ.ಕೃಷ್ಣಪ್ಪ ಗೈರಾದ ಹಿನ್ನೆಲೆಯಲ್ಲಿ  ರಾಹುಲ್ ಪ್ರವಾಸದ ವೇಳೆ ಉದ್ದೇಶ ಪೂರ್ವಕವಾಗಿ ಗೈರಾದ್ರಾ ನಾಯಕರು ಎನ್ನುವ ಪ್ರಶ್ನೆ ಮೂಡಿದೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಗೈರಾಗಿದ್ದಕ್ಕೆ ಕಾಂಗ್ರೆಸ್ ನಾಯಕರಿಂದ ಅಸಮಾಧಾನ ವ್ಯಕ್ತವಾಗಿದೆ.  ಆದರೆ ಗೈರಾಗಿರೋದಕ್ಕೆ ಇನ್ನೂ ಯಾವುದೇ ರೀತಿಯಾದ ಕಾರಣವನ್ನೂ ಕೂಡ ಅವರು ನೀಡಿಲ್ಲ.

ಇನ್ನು ರಾಹುಲ್ ಪ್ರವಾಸದ ವೇಳೆ ಅಂಬರೀಶ್ ಅವರೂ ಕೂಡ ಗೈರಾಗಿದ್ದು, ರಮ್ಯಾ ಆಗಮಿಸುತ್ತಾರೆ ಎನ್ನುವ ಉದ್ದೇಶದಿಂದ ಬರಲಿಲ್ಲವೇ ಎನ್ನುವ ಪ್ರಶ್ನೆಗಳೂ ಕೂಡ ಮೂಡಿವೆ. ಪ್ರಭಾವಿ ನಾಯಕ ಅಂಬರೀಶ್​​ ಗೈರು ಹಾಜರಿಯ ಬಗ್ಗೆ ಗೊಂದಲ ಎದುರಾಗಿದೆ.

ರಮ್ಯಾ ಮತ್ತು ಅಂಬರೀಷ್ ಮಧ್ಯೆ ರಾಜಕೀಯ ಭಿನ್ನಾಭಿಪ್ರಾಯ ಮುಂದುವರಿದಿದ್ದು, ಕೈ ನಾಯಕರ ಗೊಂದಲ ಬಗೆಹರಿಯದ ಹಿನ್ನೆಲೆಯಲ್ಲಿ ಅಂಬರೀಶ್​​ ಗೈರು ಹಾಜರಾಗಿದ್ದರು ಎನ್ನಲಾಗುತ್ತಿದೆ.

ರಾಹುಲ್ ಪ್ರವಾಸದ ವೇಳೆ ಮಂಡ್ಯದ ಮಾಜಿ ಸಂಸದೆ ರಮ್ಯಾ ಕೂಡ ಗೈರಾಗಿದ್ದು, ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೇಸರಗೊಂಡಿದ್ದಾರೆ ಎನ್ನಲಾಗಿದೆ.