Asianet Suvarna News Asianet Suvarna News

ಪರಿಹಾರ ತರದ ಬಿಎಸ್‌ವೈರನ್ನು ಬಲಿಷ್ಠ ಸಿಎಂ ಅನ್ನಬೇಕಾ?: ಸಿದ್ದು ಸಮರ್ಥನೆ

ಪರಿಹಾರ ತರದ ಬಿಎಸ್‌ವೈರನ್ನು ಬಲಿಷ್ಠ ಸಿಎಂ ಅನ್ನಬೇಕಾ?: ಸಿದ್ದು| ಬಿಎಸ್‌ವೈ ಅವರನ್ನು ವೀಕ್‌(ದುರ್ಬಲ) ಸಿಎಂ ಎಂದು ನೀಡಿರುವ ಹೇಳಿಕೆಗೆ ಸಮರ್ಥನೆ

Congress Leader Siddaramaiah Slams BS Yediyurappa Over Flood Relief fund
Author
Bangalore, First Published Oct 2, 2019, 8:09 AM IST

ರಾಯಚೂರು[ಅ.02]: ಕೇಂದ್ರ ಸರ್ಕಾರದಿಂದ ಪ್ರವಾಹದ ಪರಿಹಾರ ತರಲು ಸಾಧ್ಯವಾಗದ ಬಿ.ಎಸ್‌.ಯಡಿಯೂರಪ್ಪ ಅವರನ್ನು ಸ್ಟ್ರಾಂಗ್‌ ಮುಖ್ಯಮಂತ್ರಿ ಎನ್ನಬೇಕಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಂಗಳವಾರ ಮಾತನಾಡಿದ ಅವರು, ಬಿಎಸ್‌ವೈ ಅವರನ್ನು ವೀಕ್‌(ದುರ್ಬಲ) ಸಿಎಂ ಎಂದು ನೀಡಿರುವ ಹೇಳಿಕೆಯನ್ನು ಸಮರ್ಥಿಸಿಕೊಂಡರು. ರಾಜ್ಯದಲ್ಲಿ ಸಂಭವಿಸಿರುವ ಪ್ರವಾಹಕ್ಕೆ ಪರಿಹಾರ ತರುವಲ್ಲಿ ವಿಫಲವಾಗಿರುವುದರಿಂದಲೇ ಹಾಗೆ ಮಾತನಾಡಿದ್ದೇನೆ. ಬಿಎಸ್‌ವೈ ತಂತಿ ಮೇಲೆ ನಡೆಯುತ್ತಿದ್ದಾರೆ, ಬಿದ್ದು ಹೋದರೆ ಹೇಗೆ ಎನ್ನುವ ಕಾರಣಕ್ಕೆ ರಾಜೀನಾಮೆ ಕೊಡಲಿ ಎಂದು ಹೇಳಿದ್ದೇನೆ ಎಂದರು.

ಬ್ಯುಸಿ ಇದ್ದಿದ್ದರಿಂದ ಕರ್ನಾಟಕ ನೆರೆ ಬಗ್ಗೆ ಮೋದಿ ಟ್ವೀಟ್‌ ಇಲ್ಲ: ಅಂಗಡಿ ವಿವಾದ

ನೆರೆ ಪರಿಹಾರ ವಿಷಯದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ರಾಜ್ಯದಲ್ಲಿ ನೆರೆಗೆ ಸ್ಪಂದಿಸದ ಪ್ರಧಾನಿ ಮೋದಿಯವರು ಬಿಹಾರ ರಾಜ್ಯದ ನೆರೆಗೆ ಸ್ಪಂದಿಸಿದ್ದಾರೆ. ನೆರೆ ಪರಿಹಾರ ಕೇಳುವ ಧೈರ್ಯವನ್ನು ಸಿಎಂ ಯಡಿಯೂರಪ್ಪ ಮಾಡುತ್ತಿಲ್ಲ. ಅವರಿಗೆ ಧೈರ್ಯ ಇಲ್ಲದಿದ್ದರೇ ನಮ್ಮನ್ನು ಕರೆಯಲಿ ನಾವು ಹೋಗುತ್ತೇವೆ ಎಂದು ತಿಳಿಸಿದರು.

ಬಿಜೆಪಿಗೆ ಸೇರ್ಪಡೆ ಉದ್ದೇಶಕ್ಕಾಗಿ ಪಕ್ಷಕ್ಕೆ ರಾಜೀನಾಮೆ ನೀಡಿದ ಶಾಸಕರ ವಿರುದ್ಧ ಅನರ್ಹ ಅಸ್ತ್ರ ಬಳಕೆ ಮಾಡಲಾಗಿದೆ. ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಅವರು ಹೊರಡಿಸಿರುವ ಅನರ್ಹತೆಯ ಆದೇಶವನ್ನು ಸುಪ್ರೀಂ ಕೋರ್ಟ್‌ ಎತ್ತಿ ಹಿಡಿಯುವ ವಿಶ್ವಾಸವಿದೆ ಎಂದು ಹೇಳಿದರು.

'ಬಿಹಾರಕ್ಕೆ ಮಿಡಿದ ಮೋದಿ 52 ಇಂಚಿನ ಎದೆ, ಕರ್ನಾಟಕ ವಿಚಾರದಲ್ಲಿ ಕಲ್ಲುಬಂಡೆ ಆಗಿದ್ದೇಕೆ?'

ಅವೈಜ್ಞಾನಿಕವಾದ ನೋಟು ಅಮಾನ್ಯ, ಜಿಎಸ್‌ಟಿಯಂತಹ ಯೋಜನೆಗಳನ್ನು ಜಾರಿಗೊಳಿಸಿದರ ಪರಿಣಾಮವಾಗಿಯೇ ಇಂದು ದೇಶದ ಆರ್ಥಿಕ ಮಟ್ಟಕುಸಿಯಲು ಕಾರಣವಾಗಿದೆ ಎಂದು ಹೇಳಿದರು.

Follow Us:
Download App:
  • android
  • ios