ಅನರ್ಹ ಶಾಸಕರ  ಬಗ್ಗೆ ಮಾತನಾಡುತ್ತಮಾಜಿ ಸಚಿವ ಶಿವರಾಜ್ ತಂಗಡಗಿ ಒಂದಿಷ್ಟು ಹೊಸ ವಿಚಾರ ಹೇಳಿದ್ದಾರೆ. ಬಿಜೆಪಿ ಮೇಲೆ ವಾಗ್ದಾಳಿ ಮಾಡುತ್ತ ಸಿದ್ದರಾಮಯ್ಯ ಅವರನ್ನು ಕೊಂಡಾಡಿದ್ದಾರೆ. ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರ್ಕಾರ ಮಾಡ್ತಾ ಇದೆ ಎಂದು ಆರೋಪಿಸಿದ್ದಾರೆ.

ಕೊಪ್ಪಳ[ಜು. 29]  ಬಿಜೆಪಿಯವರು ಪಕ್ಕದ ಮನೆಯವರ ಮಗುವನ್ನು ನಮ್ಮ‌ಮಗು ಅಂತಾ ನಾಮಕರಣ ಮಾಡ್ತಾ ಇದ್ದಾರೆ. ಬಿಜೆಪಿಯವರಿಗೆ ನಾಚಿಕೆ ಮಾನ ಮರ್ಯಾದೆ ಇಲ್ಲ ಎಂದು ಕೊಪ್ಪಳದ ಗಂಗಾವತಿಯಲ್ಲಿ ಮಾಜಿ ಸಚಿವ ಶಿವರಾಜ್ ತಂಗಡಗಿ ಬಿಜೆಪಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಅತೃಪ್ತರಿಂದ ತಮ್ಮ ಮಾನ ಮುಚ್ಚಿಕೊಳ್ಳುವುದಕ್ಕೆ ಸಿದ್ದರಾಮಯ್ಯನವರ ಹೆಸರು ಹೇಳ್ತಾ ಇದ್ದಾರೆ. ಸಿದ್ದರಾಮಯ್ಯನವರು ಯಾರನ್ನು ಕಳಿಸಿಲ್ಲ. ಅತೃಪ್ತರ ಚಟುವಟಿಕೆಯಿಂದ ಸಿದ್ದರಾಮಯ್ಯ ತುಂಬಾ ನೊಂದಿದ್ದಾರೆ ಎಂದರು.

‘ಅತೃಪ್ತರಿಗೆ ಧಮ್‌ ಇಲ್ಲ, ಗಂಡಸ್ತನವಿದ್ರೆ ಸದನಕ್ಕೆ ಬಂದು ಮತ ಹಾಕ್ಬೇಕಿತ್ತು ’

ಅತೃಪ್ತರನ್ನು ನಮ್ಮನ್ನು ಅನರ್ಹ ಮಾಡಬೇಡಿ ಎಂದು ಕರೆ ಮಾಡಿದ್ದರು. ನಾವು ಬರ್ತೀವಿ ಅಂತಾ ಸಿದ್ದರಾಮಯ್ಯನವರಿಗೆ ಕರೆ ಮಾಡಿದ್ದರು. ಸಿದ್ದರಾಮಯ್ಯನವರ ಜೊತೆ ನಾನು ಇದ್ದಾಗಲೇ ಅವರು ಕರೆ ಮಾಡಿದ್ದರು. ಇದೀಗ ಅತೃಪ್ತರನ್ನು ಬೀದಿಗೆ ತಂದು ನಿಲ್ಲಿಸುವ ಕೆಲಸ ಬಿಜೆಪಿಯಿಂದಾಗಿದೆ.

ನಂಬಿದವರನ್ನು ಬೀದಿಗೆ ನಿಲ್ಲಿಸಿ ಇದೀಗ ಬಿಜೆಪಿ ಸೇಫ್ ಆಗಿದೆ. ಅತೃಪ್ತರನ್ನು ಅನರ್ಹ ಮಾಡಿದ್ರೆ ಬಿಜೆಪಿಗೆ ಯಾಕಿಷ್ಟೂ ತ್ರಾಸ್ ಆಗ್ತಿದೆ. ಮತ್ತೊಬ್ಬರನ್ನು ಹಾಳು ಮಾಡಿ ಬಿಜೆಪಿ ಸರ್ಕಾರ ಮಾಡ್ತಾ ಇದೆ ಎಂದು ಆರೋಪಿಸಿದರು.