ನಟ ಅಂಬರಿಶ್ ಅವರ ಅಂತಿಮ ದರ್ಶನಕ್ಕೆ ಆಗಮಿಸದ ನಟಿ ರಮ್ಯಾ ವಿರುದ್ಧ  ಬಿಜೆಪಿ ಮುಖಂಡ ಹಾಗೂ ನಟ ಜಗ್ಗೇಶ್ ಟ್ವೀಟರ್ ಮೂಲಕ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ನಿಧನಕ್ಕೆ ಇಡೀ ಕರುನಾಡು ಕಂಬನಿ ಮಿಡಿದಿದೆ. ಆದರೆ, ಮಂಡ್ಯ ದಿಂದ ಒಂದು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಕಾಂಗ್ರೆಸ್‌ನ ಸಾಮಾ ಜಿಕ ಜಾಲತಾಣ ಮುಖ್ಯಸ್ಥೆ ರಮ್ಯಾ ಅವರು ಅಂಬರೀಷ್ ಅಂತಿಮ ದರ್ಶನಕ್ಕೆ ಆಗಮಿಸದಿರುವುದಕ್ಕೆ ಬಿಜೆಪಿ ಮುಖಂಡ ಹಾಗೂ ನಟ ಜಗ್ಗೇಶ್ ಟ್ವೀಟರ್ ಮೂಲಕ ರಮ್ಯಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಾಂಗ್ರೆಸ್‌ನಿಂದ ಮಂಡ್ಯಲೋಕಸಭೆಗೆ ಆಯ್ಕೆಯಾಗುವ ಮೂಲಕ ರಾಜ ಕೀಯ ಜೀವನ ಆರಂಭಿಸಿದ ನಟಿ ರಮ್ಯಾ, ಮಂಡ್ಯದ ಗಂಡು ಅಂಬರೀಷ್ ಅವರ ಅಂತಿಮ ದರ್ಶನಕ್ಕೆ ಆಗಮಿಸದಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ. ಇದರ ಬೆನ್ನಲೇ ನಟ ಜಗ್ಗೇಶ್ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ರಮ್ಯಾ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಸಾವನ್ನು ಗೌರವಿಸದ ಮನುಷ್ಯ ರೂಪದ ರಾಕ್ಷಣ ಗುಣಹೊಂದಿದವರು, ಅಂತಿಮ ದರ್ಶನಕ್ಕೂ ಆಗಮಿಸದೇ ಕ್ರೂರತ್ವದ ಮತ್ತೊಂದು ಮುಖವನ್ನು ಪ್ರದರ್ಶನ ಮಾಡಿದ್ದಾರೆ. ನಾವು ಮಾಡುವ ಪ್ರತಿಯೊಂದನ್ನು ಆ ದೇವರು ನೋಡುತ್ತಿರುತ್ತಾನೆ. ಒಂದಲ್ಲ ಒಂದು ದಿನ ಇದಕ್ಕೆ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಅರ್ಥದಲ್ಲಿ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.

Scroll to load tweet…