ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಕಾಂಗ್ರೆಸ್​ ಸೋಲುವುದು ಎಂದು ಹಿರಿಯ ನಾಯಕ ಜನಾರ್ಧನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಮಂಗಳೂರು (ಮಾ.14): ಮುಂದಿನ ತಿಂಗಳು ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆಯಲಿರುವ ಉಪ-ಚುನಾವಣೆಗಳಿಗೆ ಕಾಂಗ್ರೆಸ್ ಸಿದ್ಧತೆ ಆರಂಭಿಸುವ ಮುಂಚೆಯೇ ಪಕ್ಷದ ಹಿರಿಯ ನಾಯಕ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಕಾಂಗ್ರೆಸ್​ ಸೋಲುವುದು ಎಂದು ಹಿರಿಯ ನಾಯಕ ಜನಾರ್ಧನ ಪೂಜಾರಿ ಭವಿಷ್ಯ ನುಡಿದಿದ್ದಾರೆ.

ಉಪ ಚುನಾವಣೆಗೆ ಮೋದಿ ಮೋಡಿ ಅಗತ್ಯವಿಲ್ಲ, ಸಿದ್ದರಾಮಯ್ಯರಿಂದಲೇ ಕಾಂಗ್ರೆಸ್'ಗೆ ಸೋಲುಂಟಾಗಲಿದೆ ಎಂದು ಪೂಜಾರಿ ಹೇಳಿದ್ದಾರೆ.

ಜನಾರ್ದನ ಪೂಜಾರಿ ನುಡಿದಿರುವ ಭವಿಷ್ಯಕ್ಕೆ ಪ್ರತಿಕ್ರಯಿಸಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್​, ಪೂಜಾರಿ ಈ ಹಿಂದೆ ಕೂಡ ಹೇಳಿಕೆ ನೀಡಿದ್ದಾರೆ, ಆ ಹೇಳಿಕೆಗಳನ್ನು ಅಲ್ಲೇ ಬಿಡೋಣ, ಪೂಜಾರಿ ಹೇಳಿಕೆಯಿಂದ ಯಾವುದೇ ಪರಿಣಾಮ ಆಗಲ್ಲವೆಂದು ಹೇಳಿದ್ದಾರೆ.

ಏಪ್ರಿಲ್ 9ಕ್ಕೆ ನಂಜನಗೂಡು ಹಾಗೂ ಗುಂಡ್ಲುಪೇಟೆ ವಿಧಾನಸಭೆಗಳಿಗೆ ಉಪ ಚುನಾವಣೆ