ಕ್ರಿಕೆಟಿಗರಾಗಿ ಹೆಸರು ಮಾಡಿ ರಾಜಕಾರಣಿಯಾಗಿ ಪರಿವರ್ತನೆ ಮಾಡಿ ಅಧಿಕಾರನ್ನು ಅನುಭವಿಸುತ್ತಿರುವ ನವಜೋತ್ ಸಿಂಗ್ ಸಿಧು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮುಖಂಡರೊಬ್ಬರ ಹೇಳಿಕೆ ಸಮರ್ಥಿಸುವ ಭರದಲ್ಲಿ ಎಡವಟ್ಟು ಮಾಡಿಕೊಂಡಿದ್ದಾರೆ.

ನವದೆಹಲಿ[ಅ.1] ಅಫೀಮು ಬೆಳೆಯುವುದನ್ನು ಕಾನೂನುಬದ್ಧಗೊಳಿಸಬೇಕು ಎಂಬ ಆಮ್‌ ಆದ್ಮಿ ಪಕ್ಷದ ನಾಯಕ ಧರಮ್‌ವೀರ್‌ ಗಾಂಧಿ ಅವರ ಆಗ್ರಹವನ್ನು ಪಂಜಾಬ್ ಮಂತ್ರಿ ನವಜೋತ್ ಸಿಂಗ್ ಸಿಧು ಸಮರ್ಥಿಸಿಕೊಂಡಿದ್ದಾರೆ.

 ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು ಔಷಧವಾಗಿ ಅಫೀಮು ಬಳಕೆ ಮಾಡಿದ್ದರಿಂದ ನನ್ನ ಚಿಕ್ಕಪ್ಪ ದೀರ್ಘ‌ಕಾಲ ಬದುಕಿದ್ದಾರೆ. ಧರಮ್‌ವೀರ್‌ ಗಾಂಧಿ ಸರಿಯಾದುದನ್ನೇ ಹೇಳಿದ್ದಾರೆ. ನಾನು ಅವರನ್ನು ಬೆಂಬಲಿಸುತ್ತೇನೆ ಎಂದು ಸಿಧು ಹೇಳಿದ್ದಾರೆ.

ಧರಮ್‌ ವೀರ್‌ ಗಾಂಧಿ ಅವರು ಕಳೆದ ಕೆಲವು ವರ್ಷಗಳಿಂದಲೂ ಪಂಜಾಬ್ ನಲ್ಲಿ ಅಫೀಮು ಬೆಳೆಯುವುದನ್ನು ಕಾನೂನು ಬದ್ಧಗೊಳಿಸಬೇಕೆಂದು ಅನೇಕ ಸಂದರ್ಭಗಳಲ್ಲಿ ಆಗ್ರಹಿಸುತ್ತಾ ಬಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿ ಪಂಜಾಬ್‌ ಮುಖ್ಯಮಂತ್ರಿ ಅಮರೀಂದರ್‌ ಸಿಂಗ್‌ ಭೇಟಿ ಮಾಡಿ ಮಾತುಕತೆ ಮಾಡಿದ್ದರು.

Scroll to load tweet…