ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ವರ್ತನೆ ತೋರಿರುವುದು, ಕ್ಯಾಮರಾದ ಅಳುಕಿಲ್ಲದೇ ವರ್ತಿಸಿರುವುದು ಕಟು ಟೀಕೆಗೆ ಒಳಗಾಗಿದೆ.

ಕೊಡಗು(ಆ.18): ಸ್ವಾತಂತ್ರೋತ್ಸವದ ಸಮಾರಂಭದಲ್ಲಿ ಕೊಡಗಿನ ಕಾಂಗ್ರೆಸ್ ಮುಖಂಡನೊಬ್ಬ ಮಾಡಿಕೊಂಡ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಡಗಿನ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್ ಕುಮಾರ್ ಘಟನೆಯ ಕೇಂದ್ರ ಬಿಂದುವಾಗಿದ್ದಾರೆ.

ಹೌದು ಈ ಘಟನೆ ನಡೆದದ್ದು ಕೊಡಗಿನ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಕುಮಾರ್ ತಮ್ಮ ಎಡಬಾಗದಲ್ಲಿ ಕುಳಿತಿದ್ದ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯರ ಕೈ ಮೇಲೆ ಕೈ ಹಾಕುತ್ತಾರೆ. ತಕ್ಷಣ ರಮೇಶ್'ರತ್ತ ನೋಡುವ ವೀಣಾ ಅವರು ಬಲವಂತದಿಂದ ಅವರ ಕೈ ಎತ್ತಿ ಪಕ್ಕಕ್ಕಿಡುವ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ. ಇಬ್ಬರು ಪರಸ್ಪರ ನಗುತ್ತಲೇ ಇದ್ದ ದೃಶ್ಯವೂ ಕೂಡ ಸೆರೆಯಾಗಿದೆ. ವೇದಿಕೆ ಮೇಲೆ ಯೋಜನಾ ಹಾಗೂ ಸಾಂಖ್ಯೆಕ ಸಚಿವ ಸೀತಾರಾಮ್, ಜಿಲ್ಲಾಧಿಕಾರಿ ಹಾಗೂ ಮುಂತಾದ ಗಣ್ಯರು ಹಾಜರಿದ್ದರೂ ಯಾವುದೇ ಅಳುಕಿಲ್ಲದೇ ಕೈ ಮುಖಂಡ ವಿಧಾನಪರಿಷತ್ ಸದಸ್ಯೆಯ ಕೈ ಸವರಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ವರ್ತನೆ ತೋರಿರುವುದು, ಕ್ಯಾಮರಾದ ಅಳುಕಿಲ್ಲದೇ ವರ್ತಿಸಿರುವುದು ಕಟು ಟೀಕೆಗೆ ಒಳಗಾಗಿದೆ.

ಹೀಗಿತ್ತು ಆ ಕ್ಷಣ...