ಪ್ರಧಾನಿಗೆ ಜನ್ಮದಿನ ಶುಭಾಶಯ ಹೇಳಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ್ದಾರೆ. ಮನೀಶ್‌ರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ನವದೆಹಲಿ(ಸೆ.17): ಇತ್ತೀಚೆಗೆ ಪ್ರಧಾನಿ ಮೋದಿ ಅವರನ್ನು ಅವಹೇಳನಕಾರಿ ಶಬ್ದಗಳಲ್ಲಿ ಟ್ವೀಟರ್‌ನಲ್ಲಿ ಟೀಕಿಸಿ ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಸುದ್ದಿಯಾಗಿದ್ದರು. ಆ ಸಾಲಿಗೀಗ ಇನ್ನೊಬ್ಬ ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಸೇರಿದ್ದಾರೆ. ‘ಭಕ್ತರನ್ನು (ಅನುಯಾಯಿಗಳನ್ನು) ಚೂ..ಗಳನ್ನಾಗಿ (ಮೂರ್ಖರನ್ನಾಗಿ) ಮತ್ತು ಮೂರ್ಖರನ್ನು ಭಕ್ತರನ್ನಾಗಿ.. ಮಾಡುವುದು ಎಂದರೆ ಇದೇ.. ಮಹಾತ್ಮಾ ಗಾಂಧೀಜಿಗೆ ಕೂಡ ಮೋದಿಗೆ ದೇಶಭಕ್ತಿ ಕಲಿಸಲಾಗದು’ ಎಂದು ಪ್ರಧಾನಿಗೆ ಜನ್ಮದಿನ ಶುಭಾಶಯ ಹೇಳಿದ ಕೆಲವೇ ಗಂಟೆಗಳಲ್ಲಿ ಟ್ವೀಟ್ ಮಾಡಿದ್ದಾರೆ. ಮನೀಶ್‌ರ ಈ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred