ರಾಜ್ಯ ಕಾಂಗ್ರೆಸ್ ಮುಖಂಡ ಬಿಜೆಪಿಗೆ ಸೇರ್ಪಡೆ

First Published 5, Feb 2018, 7:30 PM IST
Congress Leader Join BJP
Highlights

. ಇವರ ತಂದೆ ದಿ.ಎಂ.ವೈ.ಘೋರ್ಪಡೆ ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರದಲ್ಲಿ ಏಳು ಬಾರಿ ಶಾಸಕ, ಒಮ್ಮೆ ಸಂಸದರಾಗಿದ್ದರು.

ಬೆಂಗಳೂರು(ಫೆ.05): ಕಾಂಗ್ರೆಸ್​​​​ ಹಿರಿಯ ನಾಯಕರಾಗಿದ್ದ ಮಾಜಿ ಸಚಿವ ದಿ. ಎಂ.ವೈ ಘೋರ್ಪಡೆ ಅವರ ಪುತ್ರ ಕಾರ್ತಿಕ್ ಘೋರ್ಪಡೆ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  

ದೆಹಲಿ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಮ್ಮುಖದಲ್ಲಿ ಸೇರಿದ್ದಾರೆ. ಇವರ ತಂದೆ ದಿ.ಎಂ.ವೈ.ಘೋರ್ಪಡೆ ಬಳ್ಳಾರಿ ಜಿಲ್ಲೆ ಸಂಡೂರು ಕ್ಷೇತ್ರದಲ್ಲಿ ಏಳು ಬಾರಿ ಶಾಸಕ, ಒಮ್ಮೆ ಸಂಸದರಾಗಿದ್ದರು. ಎಸ್.ಎಂ. ಕೃಷ್ಣ ಸಿಎಂ ಆಗಿದ್ದ ಅವಧಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಸಂಡೂರು ಸಂಸ್ಥಾನದ ರಾಜವಂಶಸ್ಥ ಘೋರ್ಪಡೆಯವರು ರಾಜಕೀಯದ ಜೊತೆಗೆ ಛಾಯಾಗ್ರಹಣ, ಸಾಹಿತ್ಯ ರಚನೆಯಲ್ಲಿ ಆಸಕ್ತಿ ಹೊಂದಿದ್ದರು.

loader