ಬಿಜೆಪಿ ಮುಖಂಡನ ಮೇಲೆ ಕಾಂಗ್ರೆಸ್ ಮುಖಂಡನಿಂದ ಫೈರಿಂಗ್

First Published 4, Apr 2018, 6:02 PM IST
Congress Leader Firing on BJP Leader
Highlights

ಕಾಂಗ್ರೆಸ್  ಮುಖಂಡ  ಜನಾರ್ದನ್ ಅಲಿಯಾಸ್ ಜಾನಿ ಎಂಬುವನಿಂದ ಬಿಜೆಪಿ ಮುಖಂಡ ರಾಮು ಅಲಿಯಾಸ್ ರಾಮಣ್ಣ ಮೇಲೆ ಪೈರಿಂಗ್ ನಡೆದಿರುವ ಘಟನೆ  ಹುಣಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಹೊಸಕೋಟೆ (ಏ. 04): ಕಾಂಗ್ರೆಸ್  ಮುಖಂಡ  ಜನಾರ್ದನ್ ಅಲಿಯಾಸ್ ಜಾನಿ ಎಂಬುವನಿಂದ ಬಿಜೆಪಿ ಮುಖಂಡ ರಾಮು ಅಲಿಯಾಸ್ ರಾಮಣ್ಣ ಮೇಲೆ ಪೈರಿಂಗ್ ನಡೆದಿರುವ ಘಟನೆ  ಹುಣಸೇನಹಳ್ಳಿ ಗ್ರಾಮದಲ್ಲಿ ನಡೆದಿದೆ. 

ಚುನಾವಣಾ ಪ್ರಚಾರದ ವೇಳೆ  ನಮ್ಮ ಕಾರ್ಯಕರ್ತರ ಮನೆಗಳಲ್ಲಿ ಮತ ಕೇಳುತ್ತಿಯಾ ಅಂತ ದಮ್ಕಿ ಹಾಕಿ ಪಿಸ್ತೂಲ್ನಿಂದ ಪೈರಿಂಗ್ ಮಾಡಿರುವ  ಆರೋಪ ಕೇಳಿ ಬಂದಿದೆ.  

ರಾಮಣ್ಣ ಮೇಲೆ ಎರಡು ಸುತ್ತು ಗುಂಡು ಹಾರಿಸಿ ನಂತರ ಸ್ಥಳದಿಂದ ಜನಾರ್ಧನ್  ಪರಾರಿಯಾಗಿದ್ದಾರೆ.   ಅದೃಷ್ಟವಶಾತ್ ರಾಮಣ್ಣ ಪ್ರಾಣಾಪಾಯದಿಂದ ಪಾರಾಗಿದ್ದು  ಗುಂಡುಗಳು  ಸ್ಥಳದಲ್ಲಿದ್ದ ಮರಕ್ಕೆ ತಾಗಿವೆ. 
 
 

loader