ರಾಜ್ಯ ರಾಜಕೀಯದಲ್ಲಿ ವಿಪ್ಲವದಲ್ಲಿ ಇಂದು ವಿಶ್ವಾಸ ಮತ ಯಾಚನೆ ನಡೆಯುವ ಸಾಧ್ಯತೆ ಇದೆ. ಇತ್ತ ಮೈತ್ರಿ ಪಾಳಯ ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದರೆ ಅತ್ತ, ಬಿಜೆಪಿ ಸರ್ಕಾರ ರಚನೆ ಉತ್ಸಾಹದಲ್ಲಿದೆ.
ಬೆಂಗಳೂರು [ಜು.22] : ರಾಜ್ಯದಲ್ಲಿ ಅತೃಪ್ತ ಶಾಸಕರಿಂದ ಬಲ ಕಳೆದುಕೊಂಡಿರುವ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಪಾಳಯ ವಿಶ್ವಾಸ ಮತ ಯಾಚನೆಗೆ ಮುಂದಾಗಿದೆ.
ಆದರೆ ಮುಂಬೈನಲ್ಲಿ ಬೀಡುಬಿಟ್ಟಿರುವ ಕೈ-ಜೆಡಿಎಸ್ ಅತೃಪ್ತ ಶಾಸಕರು ಮಾತ್ರ ತಮ್ಮ ಪಟ್ಟು ಬಿಡುತ್ತಿಲ್ಲ. ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎನ್ನುತ್ತಿದ್ದಾರೆ.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇಂದೇ ವಿಶ್ವಾಸಮತ ಯಾಚನೆ ನಡೆಯುವ ಸಾಧ್ಯತೆ ಇದ್ದು, ಕೊನೆಯ ಹಂತದವರೆಗೂ ತಮ್ಮ ಪ್ರಯತ್ನವನ್ನು ಮೈತ್ರಿ ಪಾಳಯದ ನಾಯಕರು ಮುಂದುವರಿದಿದ್ದಾರೆ.
ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ತಮ್ಮದೇ ಗೆಲುವಿನ ವಿಶ್ವಾಸದಲ್ಲಿದ್ದಾರೆ. ಅಲ್ಲದೇ ವಿಜಯದ ಸಂಕೇತ ತೋರಿಸಿ ವಿಧಾನಸೌಧ ಪ್ರವೇಶಿಸಿದ್ದಾರೆ.
