ಗದಗ  : ಲೋಕಸಭಾ ಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಸರ್ಕಾರ ಉರುಳಿಸುವ ಚರ್ಚೆಗಳು ರಾಜ್ಯ ರಾಜಕಾರಣದಲ್ಲಿ ಜೋರಾಗಿವೆ. 

ಈ ಬಗ್ಗೆ ಗದಗ್ ನಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಎಚ್.ಕೆ.ಪಾಟೀಲ್ ಸರ್ಕಾರ ಉರುಳಿಸುವ ಪ್ರಕ್ರಿಯೆಯೊಂದು ರಾಜದ್ರೋಹ ಎಂದು ಹೇಳಿದ್ದಾರೆ. 

ಕಲೆವರು ಒಂದೆಡೆ ಎಲ್ಲದಕ್ಕೂ ಅನುಮತಿ ಕೊಟ್ಟು ವಿಶ್ವಾಸ ಮತ ನೀಡುತ್ತೀರಿ. ಹೊರಗೆ ಬಂದು ಸರ್ಕಾರದ ವಿರುದ್ಧ ಮಾತನಾಡುತ್ತಾರೆ.  ಸರ್ಕಾರದ ವಿರುದ್ಧ ಐದಾರು ಜನ ಶಾಸಕರು ಮಾತನಾಡುವುದನ್ನು ಗಮನಿಸುತ್ತಿದ್ದೇವೆ ಎಂದು ಹೇಳಿದರು. 

ಬಿಜೆಪಿ ಮುಖಂಡರಾದ ಬಿ.ಎಸ್.ವೈ ಅಶೋಕ್, ಈಶ್ವರಪ್ಪ ಇವರೆಲ್ಲಾ ಸಂವಿಧಾನಿಕ ಹುದ್ದೆಯಲ್ಲಿದ್ದವರು. ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಸರ್ಕಾರ ಕೆಡವುವ ತಂತ್ರ ಮಾಡುವುದೂ ಕೂಡ ಸರಿಯಲ್ಲ ಎಂದರು. 

ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರದ ಬಗ್ಗೆಯೂ ಪ್ರಸ್ತಾಪಿಸಿದ ಅವರು, ಅವರ ಪಕ್ಷ ಬಿಡುವುದಿಲ್ಲ. ಬಿಡುವುದಾದರೆ ಏಳೆಂಟು ತಿಂಗಳ ಹಿಂದೆಯೇ ಬಿಡುತ್ತಿದ್ದರು ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ ಪಾಟೀಲ್ ಹೇಳಿದರು.