ಬೀದರ್[ಮಾ.03] ‘ಯಡಿಯೂರಪ್ಪ ನಗು ನೋಡಿ ನನಗೆ ಖುಷಿ ಆಯ್ತು. ಲಿಂಗಾಯುತ ಎಂದರೆ ಬೈತಾರೆ, ವೀರಶೈವ ಲಿಂಗಾಯತ ಎನ್ನಬೇಕು. ಲಿಂಗಾಯತರಿಗೆ ಮೇಕಪ್ ಬೇಡ ಯಾಕಂದ್ರೆ ವಿಭೂತಿಯೇ ಮೇಕಪ್ ಇದ್ದ ಹಾಗೆ’ ಹೀಗೆ ಹೇಳಿಕೆ ನೀಡಿದ್ದು ಮಾಜಿ ಶಾಸಕ ಅಶೋಕ್ ಖೇಣಿ.

ಬೀದರ್ ನಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ತಿಂಗಳಿಗೆ ಇಷ್ಟು ಕೊಡಬೇಕು ಅಂತ ಕೋಟಾ ಸಿಸ್ಟಂ ಬಂದಿದೆ.  ಕಾಂಗ್ರೆಸ್ ನಲ್ಲಿ ಇದ್ದರೂ ಕೂಡ ಯಡಿಯೂರಪ್ಪ ಬೇಗಾ ಸಿಎಂ ಆಗಲಿ ಎಂದು ಹಾರೈಸುತ್ತೇನೆ ಎಂದರು.

ನೈಸ್ ಪ್ರಾಜೆಕ್ಟ್ ನಾನು ಲಿಂಗಾಯುತ ಆದ ಕಾರಣ ಪೂರ್ಣಗೊಳಿಸಲಾಗಲಿಲ್ಲ. ನಾನು ತಪ್ಪು ಜಾತಿಯಲ್ಲಿ ಹುಟ್ಟಿದ್ದೇನೆ.  ನಾನೇನಾದ್ರೂ ಅಶೋಕ್ ಗೌಡ ಆಗಿದ್ರೇ ಕನ್ಯಾಕುಮಾರಿವರಗೆ ನೈಸ್ ಪ್ರಾಜೆಕ್ಟ್ ಆಗುತ್ತಿತ್ತು ಎಂದು ಹೇಸರು ಹೇಳದೆ ದೇವೇಗೌಡರನ್ನು ಟೀಕೆ ಮಾಡಿದರು.