Asianet Suvarna News Asianet Suvarna News

ಹೈದರಾಬಾದ್ ಕರ್ನಾಟಕದಲ್ಲಿ ಕಾಂಗ್ರೆಸ್ ಹವಾ

ಹೈದರಾಬಾದ್ ಕರ್ನಾಟಕ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಮೇರು ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರ ಪ್ರಭಾವ ಹಾಗೂ ಈ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಈಗಲೂ ಪಕ್ಷದ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ತೀವ್ರ ಪ್ರಯತ್ನಪಟ್ಟರೂ ಬಿಜೆಪಿ ಹಾಗೂ ಜೆಡಿಎಸ್ ಈ ಪ್ರದೇಶದಲ್ಲಿ ಭದ್ರವಾಗಿ ಇನ್ನು ಕಾಲೂರಲು ಆಗಿಲ್ಲ. ಈ ಮಾತನ್ನು ಸಮೀಕ್ಷೆ ಸಮರ್ಥಿಸುತ್ತದೆ.

Congress Lead in Hyderabad karnataka says survey

ಬೆಂಗಳೂರು(ಡಿ.6): ಹೈದರಾಬಾದ್ ಕರ್ನಾಟಕ ಆರಂಭದಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಮೇರು ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರ ಪ್ರಭಾವ ಹಾಗೂ ಈ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಈಗಲೂ ಪಕ್ಷದ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ತೀವ್ರ ಪ್ರಯತ್ನಪಟ್ಟರೂ ಬಿಜೆಪಿ ಹಾಗೂ ಜೆಡಿಎಸ್ ಈ ಪ್ರದೇಶದಲ್ಲಿ ಭದ್ರವಾಗಿ ಇನ್ನು ಕಾಲೂರಲು ಆಗಿಲ್ಲ. ಈ ಮಾತನ್ನು ಸಮೀಕ್ಷೆ ಸಮರ್ಥಿಸುತ್ತದೆ.

Congress Lead in Hyderabad karnataka says survey

ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಕಡಿಮೆ ಕಳೆದ 2013 ರ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗುವಂತೆ ಕಾಣುತ್ತಿದೆ ಎಂದೇ ಸಮೀಕ್ಷೆ ಹೇಳುತ್ತಿದೆ.  ಈ ಸಮೀಕ್ಷೆಯ ಪ್ರಕಾರ ಈ ಬಾರಿ ಪಕ್ಷೇತರರ ಶಕ್ತಿ ಕುಂದುವಂತೆ ಕಾಣುತ್ತಿದೆ. ಕಳೆದ ಬಾರಿ ಶೇ.32.3 ಮತಗಳಿಕೆ ಮೂಲಕ ಏಳು ಸ್ಥಾನಗಳಲ್ಲಿ ವಿಜೃಂಭಿಸಿದ್ದ ಇತರರಿಗೆ ಈ ಬಾರಿ ಶೇ.17ರಷ್ಟು ಮಾತ್ರ ಮತಗಳಿಕೆ ಸಾಧ್ಯತೆ ಇದ್ದು, ಸೀಟು ಗಳಿಕೆ ನಾಲ್ಕಕ್ಕೆ ಕುಸಿದಿದೆ. ಇತರರ ಈ ಕುಂದಿದ ಶಕ್ತಿ ಮೂರು ಪ್ರಮುಖ ಪಕ್ಷಗಳಿಗೆ ತುಸು ಬಲ ಹೆಚ್ಚಿಸಲಿದೆ. ಇದನ್ನು ಹೊರತುಪಡಿಸಿದರೆ ಈ ಪ್ರದೇಶ ಬಹುತೇಕ ಕಳೆದ ಬಾರಿಯ ರಿಪೀಟ್ ಶೋದಂತೆ ಕಾಣುತ್ತಿದೆ. 2013ರ ಚುನಾವಣೆಯಲ್ಲಿ ಶೇ.34.7 ಮತಗಳಿಕೆ ಮೂಲಕ 23 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ಗೆ ಈ ಬಾರಿ ಮತ ಗಳಿಕೆ ಶೇ.32 ಆಗುವ ಸಂಭವವಿದೆ. ಅಂದರೆ, ಶೇ.2ರಷ್ಟು ಮತಗಳಿಕೆ ಕುಸಿಯಬಹುದು. ಆದಾಗ್ಯೂ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಅಂದರೆ, ಈ ಬಾರಿ 24 ಸ್ಥಾನಗಳನ್ನು ಗಳಿಸುವ ಭವಿಷ್ಯ ನುಡಿಯಲಾಗಿದೆ. ಅದೇ ರೀತಿ ಜೆಡಿಎಸ್ ಕೂಡ ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ತುಸು ಕಡಿಮೆ ಯಾಗಿದ್ದರೂ ಸಂಖ್ಯೆ ಹೆಚ್ಚಿಸಿಕೊಳ್ಳಲಿದೆ.

Congress Lead in Hyderabad karnataka says survey

ಕಳೆದ ಬಾರಿ ಶೇ.16.1ರ ಮತಗಳ ಮೂಲಕ 5 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್‌ನ ಮತ ಗಳಿಕೆ ಈ ಬಾರಿ ಶೇ.15 (ಶೇ.1ರಷ್ಟು ಕುಸಿತ) ಆಗಲಿದ್ದರೂ ಸ್ಥಾನ ಗಳಿಕೆ 6ಕ್ಕೆ ಹೆಚ್ಚಿದೆ. ಆದರೆ, ಬಿಜೆಪಿ ಮಾತ್ರ ಶೇಕಡಾವಾರು ಮತ ಹಾಗೂ ಸೀಟು ಎರಡರಲ್ಲೂ ಅಲ್ಪ ಗಳಿಕೆ ಕಾಣುವಂತಿದೆ. ಕಳೆದ ಬಾರಿ ಶೇ.16.9ರ ಮತಗಳಿಕೆ ಮೂಲಕ 5 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಶೇ.19ರ ಮತಗಳಿಕೆ ಮೂಲಕ ಆರು ಸೀಟು ಗಳಿಸುವ ಸಂಭವವಿದೆ. ಈ ಭಾಗದಲ್ಲಿ ಕಾಂಗ್ರೆಸ್ ಅನ್ನು ಯಾರಿಗಾದರೂ ಸೋಲಿಸುವ ಸಾಮರ್ಥ್ಯ ವಿದ್ದರೆ ಅದು ಕಾಂಗ್ರೆಸ್ಸಿಗೆ ಮಾತ್ರ! ಕಾಂಗ್ರೆಸ್‌ನ ಒಳಜಗಳ ಈ ಬಾರಿ ಮುಳುವಾಗುವ ಸಾಧ್ಯತೆಯಿದೆ. ಪಕ್ಷದ ಹಲವು ಶಾಸಕರು ಪಕ್ಷ ತಮ್ಮನ್ನು ಗೌರವವಾಗಿ ನಡೆಸಿಕೊಂಡಿಲ್ಲ ಎಂಬ ಭಾವನೆ ಹೊಂದಿದ್ದಾರೆ.

ಈ ಶಾಸಕರಿಗೆ ಗಾಳ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ಕಾಯುತ್ತಲೇ ಇವೆ. ಈ ವಿಚಾರದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಅದೇ ರೀತಿ ಈ ಭಾಗದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.18ರಷ್ಟು ಮತದಾರರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಇದು ಸಹ ನಿರ್ಣಾಯಕ. ಜತೆಗೆ, ಲಿಂಗಾಯತ ಧರ್ಮ ವಿಚಾರವೂ ಪರಿಣಾಮ ಬೀರುವ ಸಂಭವವಿದೆ.

Follow Us:
Download App:
  • android
  • ios