Asianet Suvarna News Asianet Suvarna News

ಹೈದರಾಬಾದ್ ಕರ್ನಾಟಕ ಕಾಂಗ್ರೆಸ್'ಗೆ - ಕರಾವಳಿ ಬಿಜೆಪಿಗೆ

ಚುನಾವಣಾ ಜ್ವರ ರಾಜ್ಯವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲೇ, ಕರ್ನಾಟಕದ ಮತದಾರರ ಮನದಾಳವನ್ನು ಕರಾರುವಾಕ್ಕಾಗಿ ಅರಿಯುವುದಕ್ಕೆ ಹೆಸರುವಾಸಿಯಾಗಿರುವ ಕನ್ನಡಪ್ರಭ-ಸುವರ್ಣನ್ಯೂಸ್ ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆ ನಡೆಸಿವೆ.

Congress Lead in Hyderabad Karnataka BJP Lead in Coastal says Pre Poll survey

ಬೆಂಗಳೂರು(ಡಿ.6): ಇನ್ನು ಐದು ತಿಂಗಳಲ್ಲಿ ಎದುರಾಗಲಿರುವ ಅತ್ಯಂತ ಕುತೂಹಲಕಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ‘ಭಾಗ್ಯಗಳ ಸರದಾರ’ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬರುತ್ತಾರಾ? ನರೇಂದ್ರ ಮೋದಿ- ಅಮಿತ್ ಶಾ ತಂತ್ರಗಾರಿಕೆಯ ಬಲದೊಂದಿಗೆ ಬಿಜೆಪಿಯ ಯಡಿಯೂರಪ್ಪ ಗದ್ದುಗೆ ಏರುತ್ತಾರಾ? ದೇವೇಗೌಡರ ಚಾಣಕ್ಯ ತಂತ್ರದ ನೆರವಿನಿಂದ ಕುಮಾರ ಸ್ವಾಮಿ ಅವರು ಕಿಂಗ್ ಆಗುತ್ತಾರಾ ಅಥವಾ ಕಿಂಗ್ ಮೇಕರ್ ಆಗುತ್ತಾರಾ ಎಂಬ ಕುತೂಹಲಗಳು ದಿನೇದಿನೇ ಹೆಚ್ಚಾಗುತ್ತಲೇ ಇವೆ. ಮತದಾರರ ಮನ ಗೆಲ್ಲಲು ಈಗಾಗಲೇ ಮೂರೂ ಪಕ್ಷಗಳ ಅತಿರಥರು ಯಾತ್ರೆ ಹೊರಟಿದ್ದಾರೆ.

Congress Lead in Hyderabad Karnataka BJP Lead in Coastal says Pre Poll survey

ಚುನಾವಣಾ ಜ್ವರ ರಾಜ್ಯವನ್ನು ನಿಧಾನವಾಗಿ ಆವರಿಸಿಕೊಳ್ಳುತ್ತಿದೆ. ಇಂತಹ ಹೊತ್ತಿನಲ್ಲೇ, ಕರ್ನಾಟಕದ ಮತದಾರರ ಮನದಾಳವನ್ನು ಕರಾರುವಾಕ್ಕಾಗಿ ಅರಿಯುವುದಕ್ಕೆ ಹೆಸರುವಾಸಿಯಾಗಿರುವ ಕನ್ನಡಪ್ರಭ-ಸುವರ್ಣನ್ಯೂಸ್ ಸಂಸ್ಥೆಗಳು ಚುನಾವಣಾಪೂರ್ವ ಸಮೀಕ್ಷೆ ನಡೆಸಿವೆ. ‘ಎಝಡ್’ ರೀಸರ್ಚ್ ಸಂಸ್ಥೆ ಜತೆಗೂಡಿ ನಡೆಸಲಾಗಿರುವ ಸಮೀಕ್ಷೆಯ ಮೊದಲ ಭಾಗ ಇಂದು ಪ್ರಕಟವಾಗಿದೆ. ಇನ್ನೂ ಎರಡು ದಿನಗಳಲ್ಲಿ ಉಳಿದ ಭಾಗಗಳು ಪ್ರಕಟವಾಗಲಿವೆ.

ಕರ್ನಾಟಕವನ್ನು ಆರು ಭಾಗಗಳಾಗಿ ವಿಂಗಡಿಸಿ ಈ ಸಮೀಕ್ಷೆ ನಡೆಸಲಾಗಿದೆ. 100 ವಿಧಾನಸಭಾ ಕ್ಷೇತ್ರಗಳಲ್ಲಿ 5500 ಮಂದಿಯನ್ನು ಮಾತನಾಡಿಸಿ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮೊದಲಿಗೆ ಹೈದರಾಬಾದ್ ಕರ್ನಾಟಕ ಹಾಗೂ ಕರಾವಳಿ ಕರ್ನಾಟಕದ ಸಮೀಕ್ಷೆಗಳು ಇಂದು ಪ್ರಕಟವಾಗಿವೆ. ಗುರುವಾರ ಮುಂಬೈ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ, ಶುಕ್ರವಾರ ಮೈಸೂರು ಕರ್ನಾಟಕ ಹಾಗೂ ಬೆಂಗಳೂರು ಕರ್ನಾಟಕ ಭಾಗದ ಸಮೀಕ್ಷೆಗಳು ಅನಾವರಣಗೊಳ್ಳಲಿವೆ.

Congress Lead in Hyderabad Karnataka BJP Lead in Coastal says Pre Poll survey

40 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಪ್ರಭಾವ ಇರುವ ಹೈದರಾಬಾದ್-ಕರ್ನಾಟಕದಲ್ಲಿ ಕಾಂಗ್ರೆಸ್ ಅತ್ಯುತ್ತಮ ಪ್ರದರ್ಶನ ತೋರಿ, ಬಿಜೆಪಿ ಹಾಗೂ ಜೆಡಿಎಸ್‌ಗಿಂತ ಹೆಚ್ಚು ಸ್ಥಾನಗಳನ್ನು ಗೆದ್ದುಕೊಳ್ಳಲಿದೆ ಎಂದು ಸಮೀಕ್ಷೆ ಭವಿಷ್ಯ ನುಡಿದಿದೆ. ಮತ್ತೊಂದೆಡೆ 19 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ, ‘ಹಿಂದುತ್ವದ ಪ್ರಯೋಗಶಾಲೆ’ ಎಂದೇ ಹೆಸರುವಾಸಿಯಾಗಿರುವ ರಾಜ್ಯದ ಕರಾವಳಿ ಭಾಗದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ತೀವ್ರ ಹಿನ್ನಡೆಯಾಗುವ ಸಂಭವವಿದೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆ ನಡೆಸಿದ್ದು ಹೇಗೆ..? : ಇದು ಸುವರ್ಣ ನ್ಯೂಸ್ ಹಾಗೂ ಕನ್ನಡಪ್ರಭಕ್ಕಾಗಿ ಹಾಗೂ ಎಝಡ್ ರೀಸರ್ಚ್ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ. ಮೂರು ಹಂತಗಳಲ್ಲಿ ಈ ಸಮೀಕ್ಷೆ ನಡೆಸಲಾಗುತ್ತಿದ್ದು, ಈಗಿನದು ಮೊದಲ ಹಂತದ ಸಮೀಕ್ಷೆ. ನವೆಂಬರ್ ಆರಂಭದಿಂದ ನಾಲ್ಕನೇ ವಾರದ ನಡುವೆ ಸಮೀಕ್ಷೆ ನಡೆಸಲಾಗಿದೆ. ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸದ್ಯ ಮತದಾರರ ಮನದಿಂಗಿತ ಹೇಗಿದೆ ಎಂಬುದನ್ನು ತಿಳಿಯಲು ಇದನ್ನು ನಡೆಸಲಾಗಿದೆ. ರಾಜ್ಯದ ಒಟ್ಟು 100 ವಿಧಾನಸಭಾ ಕ್ಷೇತ್ರಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, 5500 ಜನರನ್ನು ಸಂದರ್ಶಿಸಲಾಗಿದೆ. ಪ್ರತಿ ಕ್ಷೇತ್ರದಲ್ಲಿ ಕನಿಷ್ಠ 50 ಜನರನ್ನು ಮಾತನಾಡಿಸಲಾಗಿದೆ. ಕೆಲ ಸೂಕ್ಷ್ಮ ಕ್ಷೇತ್ರಗಳಲ್ಲಿ 80 ಜನರನ್ನೂ ಸಂದರ್ಶಿಸಲಾಗಿದೆ. ಸಮೀಕ್ಷೆಯ ಮಾನದಂಡಗಳ ಪ್ರಕಾರ ಇದರ ನಿಖರತೆ ಶೇ.95. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 1 ನಗರ ಪ್ರದೇಶಕ್ಕೆ 3 ಗ್ರಾಮೀಣ ಪ್ರದೇಶಗಳಂತೆ ಸಮೀಕ್ಷೆಗೆ ಕಾರ್ಯಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

ಯಾವುದೇ ಒಂದು ಗ್ರಾಮದಲ್ಲಿ 10 ಜನರಿಗಿಂತ ಹೆಚ್ಚಿನವರನ್ನು ಸಂದರ್ಶಿಸಿಲ್ಲ. ಹಾಗಾಗಿ ಸಮೀಕ್ಷೆಯಲ್ಲಿ ವೈವಿಧ್ಯತೆ ಖಾತ್ರಿಯಾಗಿದೆ. ಹಾಗೆಯೇ, ಅಕ್ಕಪಕ್ಕದ ಮನೆಗಳ ವ್ಯಕ್ತಿಗಳನ್ನು ಸಂದರ್ಶಿಸಿಲ್ಲ. ಮತ್ತು ಒಂದೇ ಮನೆಯಲ್ಲಿ ಇಬ್ಬರು ವ್ಯಕ್ತಿಗಳನ್ನು ಮಾತನಾಡಿಸಿಲ್ಲ. ಸಂದರ್ಶಿತ ವ್ಯಕ್ತಿಗಳ ನಡುವೆ ದೂರದ ಪ್ರಾದೇಶಿಕ ಅಂತರವಿದೆ. ಇದಕ್ಕೆ ರೈಟ್ ಹ್ಯಾಂಡ್ ರೂಲ್ ಪಾಲಿಸಲಾಗಿದೆ. ಇನ್ನು, ಚುನಾವಣಾ ಗುರುತಿನ ಚೀಟಿ ಹೊಂದಿರುವ ಹಾಗೂ ಈ ಬಾರಿ ಮತದಾನ ಮಾಡುವುದಾಗಿ ಹೇಳಿರುವ ವ್ಯಕ್ತಿಗಳನ್ನು ಮಾತ್ರ ಸಮೀಕ್ಷೆಗೆ ಪರಿಗಣಿಸಲಾಗಿದೆ. ಮತಚೀಟಿ ಇಲ್ಲ, ಇನ್ಮುಂದೆ ಮಾಡಿಸಬೇಕು, ಮತ ಹಾಕುತ್ತೇನೋ ಇಲ್ಲವೋ ಗೊತ್ತಿಲ್ಲ ಎಂದವರನ್ನು ಕೈಬಿಡಲಾಗಿದೆ.

ಸಮೀಕ್ಷೆಗಾಗಿ ಕರ್ನಾಟಕವನ್ನು ಸಮಾಜೋ-ಸಾಂಸ್ಕೃತಿಕ- ಪ್ರಾದೇಶಿಕ ವಿಭಾಗವಾರು ಆರು ಭಾಗಗಳನ್ನಾಗಿ ವಿಂಗಡಿಸಿಕೊಳ್ಳಲಾಗಿದೆ. ಬೆಂಗಳೂರು, ಮುಂಬೈ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಹೈದರಾಬಾದ್ ಕರ್ನಾಟಕ ಹಾಗೂ ಹಳೆ ಮೈಸೂರು ಹೀಗೆ ಒಟ್ಟು ಆರು ಪ್ರದೇಶಗಳಲ್ಲಿ ಲಿಂಗಾಯತರು, ಒಕ್ಕಲಿಗರು, ಕುರುಬರು, ಇತರೆ ಹಿಂದುಳಿದ ವರ್ಗದವರು (ಒಬಿಸಿ), ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು (ಎಸ್‌ಸಿ/ ಎಸ್‌ಟಿ), ಮುಸ್ಲಿಮರು ಹಾಗೂ ಇತರರು ಎಂದು ಜಾತಿವಾರು ವಿಭಾಗದಡಿ ಜನರನ್ನು ಸಮೀಕ್ಷೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಇವರಲ್ಲೂ ಪುರುಷರು ಹಾಗೂ ಮಹಿಳೆಯರು, ಬೇರೆ ಬೇರೆ ವಯೋಮಾನದವರು, ಗ್ರಾಮೀಣ ಹಾಗೂ ನಗರ ಪ್ರದೇಶದ ಜನತೆ ಎಂದು ವಿಭಾಗಿಸಿ ಇನ್ನಷ್ಟು ಆಳಕ್ಕಿಳಿದು ಮಾಹಿತಿ ಸಂಗ್ರಹಿಸಲಾಗಿದೆ. ಸಂದರ್ಶಿತ ವರ್ಗದಲ್ಲಿ ವೈವಿಧ್ಯತೆ ಹಾಗೂ ಫಲಿತಾಂಶದಲ್ಲಿ ನಿಖರತೆ ಕಾಪಾಡಿಕೊಳ್ಳಲು ಈ ವಿಭಾಗ ಮಾಡಿಕೊಳ್ಳಲಾಗಿದೆ.

ಎಝಡ್ ರೀಸರ್ಚ್ ಸಂಸ್ಥೆ ಪರಿಚಯ : ಎಝಡ್ ರೀಸರ್ಚ್ ಪಾರ್ಟ್ನರ್ಸ್ ಪ್ರೈವೇಟ್ ಲಿಮಿಟೆಡ್ ಎಂಬುದು ಬೆಂಗಳೂರು ಮೂಲದ ಸಾಮಾಜಿಕ, ರಾಜಕೀಯ, ವಾಣಿಜ್ಯ ಸಂಶೋಧನಾ ಸಂಸ್ಥೆ. 10000 ಕ್ಕೂ ಹೆಚ್ಚು ಸಮೀಕ್ಷೆಗಳನ್ನು ಈ ಸಂಸ್ಥೆ ನಡೆಸಿದೆ. ಮದ್ಯದ ದೊರೆ ವಿಜಯ್ ಮಲ್ಯ ಅವರು ಜನತಾ ಪಕ್ಷ ಕಟ್ಟಿದ ಸಮಯದಿಂದ ಆರಂಭಿಸಿ ಇತ್ತೀಚಿನ ಬಿಬಿಎಂಪಿ ಚುನಾವಣೆವರೆಗೆ ಚುನಾವಣಾ ಪೂರ್ವ ಸಮೀಕ್ಷೆ, ಮತದಾನೋತ್ತರ ಸಮೀಕ್ಷೆ, ರಾಜಕೀಯ ಪಕ್ಷಗಳಿಗಾಗಿ ಮತದಾರರ ಸಮೀಕ್ಷೆ ಹಾಗೂ ಸ್ಪರ್ಧಿಗಳಿಗೆ ವೈಯಕ್ತಿಕವಾಗಿಯೂ ಸಮೀಕ್ಷೆಗಳನ್ನು ನಡೆಸುತ್ತ ಬಂದಿದೆ. ಜನಮತಗಣನೆ, ಬ್ರ್ಯಾಂಡ್ ರೀಸರ್ಚ್, ಉತ್ಪನ್ನಗಳ ಸಮೀಕ್ಷೆ, ಜಾಹೀರಾತುಗಳ ಬಗ್ಗೆ ಸಮೀಕ್ಷೆ, ಗ್ರಾಹಕರ ಸಂತೃಪ್ತಿ, ಚುನಾವಣಾ ಪೂರ್ವ ಸಮೀಕ್ಷೆಗಳು ಹೀಗೆ ನಾನಾ ವಿಷಯಗಳಲ್ಲಿ ಎಝಡ್‌ಆರ್ ಸಮೀಕ್ಷೆಗಳನ್ನು ನಡೆಸುತ್ತ ಬಂದಿದೆ. ಸಂಸ್ಥೆಯ ಸಂಶೋಧನಾ ಕೇಂದ್ರಗಳು ಬೆಂಗಳೂರು, ದೆಹಲಿ, ಮುಂಬೈ ಹಾಗೂ ಕೊಲ್ಕತ್ತಾದಲ್ಲಿವೆ. ಭಾರತವಷ್ಟೇ ಅಲ್ಲದೆ ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ, ಸಿಂಗಾಪಪುರ, ಮಲೇಷ್ಯಾ, ಥಾಯ್ಲೆಂಡ್ ಮುಂತಾದ ದೇಶಗಳಲ್ಲೂ ಇದು ಸಮೀಕ್ಷೆಗಳನ್ನು ನಡೆಸುತ್ತದೆ.

ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಅತ್ಯಂತ ನಿಖರ : ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಕರ್ನಾಟಕದ ಹಾಗೂ ಕನ್ನಡಿಗರ ನಂಬಿಕೆಯ ಪ್ರತೀಕ. ಚುನಾವಣೆಯ ವಿಚಾರ ಹಾಗೂ ಮತದಾರರ ಮನದಾಳದಲ್ಲಿ ಏನಿದೆ ಎಂಬ ವಿಚಾರಕ್ಕೆ ಬಂದರೆ ಈ ಮಾಧ್ಯಮ ಸಂಸ್ಥೆಗಳಿಗೆ ಇವೇ ಸರಿಸಾಟಿ. ಈ ಹಿಂದೆ ಸಾಕಷ್ಟು ಚುನಾವಣೆಗಳಲ್ಲಿ ಇದು ಸಾಬೀತಾಗಿದೆ. ನಿಮಗೆ ೨೦೦೮,೨೦೧೩ರ ಚುನಾವಣೆ ನೆನಪಿರಬಹುದು. ಆಗ ರಾಜ್ಯದ ಹಲವು ಪತ್ರಿಕೆಗಳು ಹಾಗೂ ರಾಷ್ಟ್ರೀಯ ಸುದ್ದಿವಾಹಿನಿಗಳು ನುಡಿದಿದ್ದ ಭವಿಷ್ಯವೇ ಬೇರೆ, ಸುವರ್ಣ ನ್ಯೂಸ್-ಕನ್ನಡಪ್ರಭ ಸಮೀಕ್ಷೆ ಹೇಳಿದ್ದೇ ಬೇರೆ. ಕೊನೆಗೆ ನಿಜವಾಗಿದ್ದು ಸುವರ್ಣ ನ್ಯೂಸ್-ಕನ್ನಡಪ್ರಭ ಸಮೀಕ್ಷೆ.

Follow Us:
Download App:
  • android
  • ios