ಗೊಲ್ಲಹಳ್ಳಿ ಹಾಗೂ ತಿಪ್ಪೂರಿನಲ್ಲಿ ಹಾಲು ಹಾಕುವ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಗಲಾಟೆ ನಡೆಸುವ ಮೂಲಕ ಹಾಲಿನ ಕ್ಯಾನ್ ಗಳನ್ನ ಚೆಲ್ಲಾಡಿದ್ದಾರೆ .ಆಲ್ಲದೆ ಗೊಲ್ಲಹಳ್ಳಿ ರೈತರ ಹಾಲನ್ನ ಎಮ್ಮಿಗೆಪುರದಲ್ಲಿ ಹಾಕುವಂತೆ ಒತ್ತಾಯ ಮಾಡಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಸೇಡಿನ ರಾಜಕಾರಣ ಶುರುವಾಗಿದೆ.ಹೌದು,ಕೆಂಗೇರಿ ಹೋಬಳಿಯ ಎಚ್.ಗೊಲ್ಲಹಳ್ಳಿ ಹಾಗೂ ತಿಪ್ಪೂರಿನಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಜಗಳಕ್ಕೆ ಸಾವಿರಾರು ಲೀಟರ್ ಹಾಲು ಮಣ್ಣು ಪಾಲಾಗಿರುವ ಘಟನೆ ನಡೆದಿದೆ. ಗೊಲ್ಲಹಳ್ಳಿ ಹಾಗೂ ತಿಪ್ಪೂರಿನಲ್ಲಿ ಹಾಲು ಹಾಕುವ ವಿಚಾರವಾಗಿ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಗಲಾಟೆ ನಡೆಸುವ ಮೂಲಕ ಹಾಲಿನ ಕ್ಯಾನ್ ಗಳನ್ನ ಚೆಲ್ಲಾಡಿದ್ದಾರೆ .
ಆಲ್ಲದೆ ಗೊಲ್ಲಹಳ್ಳಿ ರೈತರ ಹಾಲನ್ನ ಎಮ್ಮಿಗೆಪುರದಲ್ಲಿ ಹಾಕುವಂತೆ ಒತ್ತಾಯ ಮಾಡಿದ್ದಾರೆ. ಇಷ್ಟೇ ಆಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಗೂ ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಅಡ್ಡಿ ಪಡಿಸಿ ಗಲಾಟೆ ಮಾಡಿದ್ದಾರೆ. ಕಾರ್ಯಕ್ರಮಕ್ಕೂ ಮುನ್ನವೇ ಕಗ್ಗಲೀಪುರ ಪೊಲೀಸ್ ಠಾಣೆ ಪಿಎಸ್ಐ ಸುನೀಲ್ ಕುಮಾರ್ ನೋಟಿಸ್ ನೀಡುವ ಮೂಲಕ ಪರೋಕ್ಷವಾಗಿ ಶಾಸಕರಿಗೆ ಬೆಂಬಲ ನೀಡಿದ್ದಲ್ಲದೆ, ರೈತರಿಗೆ ಅವಾಜ್ ಹಾಕಿದ್ದಾನೆ.ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರು ಕ್ಷೇತ್ರದಲ್ಲಿ ಯಾವುದೇ ಕಾರ್ಯಕ್ರಮ ಮಾಡಲು ಬೀಡುತ್ತಿಲ್ಲ ಅಂತ ಕೆಎಂಎಫ್ ನಿರ್ದೇಶಕ ಪಂಚಲಿಂಗಯ್ಯ ನೇರ ಆರೋಪ ಮಾಡಿದ್ದಾರೆ.
