ಮುಗಿಯದ ಖಾತೆ ಖ್ಯಾತೆ : ಕಾಂಗ್ರೆಸ್ ಬಗ್ಗೆ ದೇವೇಗೌಡರ ಅತೃಪ್ತಿ

Congress-JDS in tug-of-war, find ministry formation
Highlights

 ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಇಂದು ದೆಹಲಿಯಲ್ಲಿ ಶಮನಗೊಳ್ಳುತ್ತದೆಯೇ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿದೆ.

ಬೆಂಗಳೂರು :  ಪ್ರಮುಖ ಖಾತೆಗಳ ಹಂಚಿಕೆಗೆ ಸಂಬಂಧಿಸಿದಂತೆ ಸಮ್ಮಿಶ್ರ ಸರ್ಕಾರದ ಅಂಗ ಪಕ್ಷಗಳಾದ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಉದ್ಭವಿಸಿರುವ ಬಿಕ್ಕಟ್ಟು ಇಂದು ದೆಹಲಿಯಲ್ಲಿ ಶಮನ ಗೊಳ್ಳುತ್ತದೆ ಎಂಬ ಕುತೂಹಲ ರಾಜ್ಯ ರಾಜಕಾರಣದಲ್ಲಿ ಮೂಡಿದೆ.

ಪ್ರಮುಖ ಖಾತೆಗಳಿಗಾಗಿ ಕಾಂಗ್ರೆಸ್ ಪಕ್ಷ ಪಟ್ಟು ಹಿಡಿದಿರುವ ಬಗ್ಗೆ ಜೆಡಿಎಸ್ ವರಿಷ್ಠ ನಾಯಕ ಎಚ್. ಡಿ.ದೇವೇಗೌಡ ಅವರು ಬೇಸರಗೊಂಡಿದ್ದಾರೆ. 

ಮುಖ್ಯಮಂತ್ರಿ ಖಾತೆ ಯನ್ನು ನಾವು ಉಳಿಸಿ ಕೊಂಡರೂ ಸಚಿವ ಸ್ಥಾನಗಳ ಪೈಕಿ ಸಿಂಹ ಪಾಲನ್ನು ಕಾಂಗ್ರೆಸ್ಸಿಗೆ ಬಿಟ್ಟು ಕೊಟ್ಟಿದ್ದೇವೆ. ಇದೀಗ ಎಲ್ಲ ಪ್ರಮುಖ ಖಾತೆಗಳೂ ತಮಗೆ ಬೇಕು ಎಂದರೆ ಹೇಗೆ? ಇದರಿಂದ ಮೈತ್ರಿಧರ್ಮ ಪಾಲನೆ ಆದಂತಾಗುವುದಿಲ್ಲ ಎಂದು ಗೌಡರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

loader