ಕಾಂಗ್ರೆಸ್ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ವಿಶ್ವನಾಥ್ ಮೃದುಧೋರಣೆ  ತಳೆದಿದ್ದಾರೆ. ‘ಕಾಂಗ್ರೆಸ್ ನನ್ನ ತಾಯಿಯಿದ್ದಂತೆ, ಆ ಪಕ್ಷದ ಕೆಲವರಿಂದ ಕಿರುಕುಳ ಆಯಿತೇ ಹೊರತು ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ’ ಎಂದು ಹೇಳಿದ್ದಾರೆ. 

ಮಡಿಕೇರಿ: ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ವಿರುದ್ಧ ತೀವ್ರ ಹರಿಹಾಯ್ದಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಈಗ ತಮ್ಮ ನಿಲುವು ಬದಲಿಸಿದ್ದಾರೆ. ಕಾಂಗ್ರೆಸ್ ಬಗ್ಗೆ ಮೃದುಧೋರಣೆ ತಳೆದಿದ್ದಾರೆ. ‘ಕಾಂಗ್ರೆಸ್ ನನ್ನ ತಾಯಿಯಿದ್ದಂತೆ, ಆ ಪಕ್ಷದ ಕೆಲವರಿಂದ ಕಿರುಕುಳ ಆಯಿತೇ ಹೊರತು ಪಕ್ಷದಿಂದ ಯಾವುದೇ ಅನ್ಯಾಯ ಆಗಿಲ್ಲ’ ಎಂದು ಹೇಳಿದ್ದಾರೆ. 

ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿ, ಕಾಂಗ್ರೆಸ್ ನನಗೆ ತಾಯಿ ಇದ್ದಂತೆ. ಕಾಂಗ್ರೆಸ್‌ನಿಂದ ನನಗೆ ಯಾವುದೇ ತೊಂದರೆಯಾಗಿಲ್ಲ. 

ಕೆಲವು ನಾಯಕರ ಕಿರುಕುಳದಿಂದ ಪಕ್ಷ ಬಿಡುವ ಅನಿವಾರ್ಯತೆ ಸೃಷ್ಟಿಯಾಯಿತು ಅಷ್ಟೆ. ಕುಮಾರಸ್ವಾಮಿ, ದೇವೇಗೌಡ ಇನ್ನಿತರರು ರಾಜಕಾರಣದಿಂದ ಹಿಂದಡಿ ಇಡದಂತೆ ಹೇಳಿ ನನ್ನ ಮೇಲಿನ ವಿಶ್ವಾಸ ಹಾಗೂ ನಂಬಿಕೆಯಿಂದ ಜೆಡಿಎಸ್‌ನಲ್ಲಿ ಸ್ಥಾನ ನೀಡಿದ್ದಾರೆ ಎಂದು ಹೇಳಿದರು.ಬಿಜೆಪಿಗೆ ಸರ್ಕಾರ ಬೀಳಿಸುವ ವ್ಯಸನ ಅಂಟಿಕೊಂಡಿದೆ ಎಂದು ಚಾಟಿ ಬೀಸಿದರು.