ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ್ಮೇಲೆ ಬಿಜೆಪಿ ಸಂಘಟನೆ ಜೋರಾಗಿದ್ದು ಕಾಂಗ್ರೆಸ್ ಸ್ವಲ್ಪ ಮಂಕಾಗಿತ್ತು.ನಾಳೆ ಕಾಂಗ್ರೆಸ್ ಮುಖಂಡರನ್ನ ಉಸ್ತುವಾರಿ ವೇಣುಗೋಪಾಲ ಲೆಫ್ಟ್ ರೈಟ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ. ಸಚಿವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ.
ಬೆಂಗಳೂರು (ಆ.30): ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ್ಮೇಲೆ ಬಿಜೆಪಿ ಸಂಘಟನೆ ಜೋರಾಗಿದ್ದು ಕಾಂಗ್ರೆಸ್ ಸ್ವಲ್ಪ ಮಂಕಾಗಿತ್ತು.ನಾಳೆ ಕಾಂಗ್ರೆಸ್ ಮುಖಂಡರನ್ನ ಉಸ್ತುವಾರಿ ವೇಣುಗೋಪಾಲ ಲೆಫ್ಟ್ ರೈಟ್ ತೆಗೆದುಕೊಳ್ಳೋಕೆ ರೆಡಿಯಾಗಿದ್ದಾರೆ. ಸಚಿವರಿಗೆ ಪಕ್ಷ ಸಂಘಟನೆ ಜವಾಬ್ದಾರಿ ನೀಡಲು ಮುಂದಾಗಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಬಂದು ಹೋದ ಮೇಲೆ ಬಿಜೆಪಿ ಮುಖಂಡರು ಸ್ವಲ್ಪ ಜಾಸ್ತಿನೇ ಆಕ್ಟೀವ್ ಆಗಿದ್ದರು. ಜೊತೆಗೆ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಸಮರೋಪಾದಿಯಲ್ಲಿ ಹೋರಾಟ ನಡೆಸಿದ್ದಾರೆ. ಆದ್ರೆ ಇದಕ್ಕೆ ತಕ್ಕ ತಿರುಗೇಟು ನೀಡದ ಕಾಂಗ್ರೆಸ್ ಸ್ವಲ್ಪ ಮಂಕಾಗಿದೆ. ಜೊತೆಗೆ ಸಂಘಟನೆಗೂ ಹೆಚ್ಚು ಒತ್ತು ಕೊಡ್ತಿಲ್ಲ ಅನ್ನೋ ಮಾತು ಕಾರ್ಯಕರ್ತರದ್ದಾಗಿತ್ತು. ಈ ಎಲ್ಲ ಬೆಳವಣಿಗೆ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೈ ನಾಯಕರನ್ನ ತರಾಟೆಗೆ ತಗೆದುಕೊಳ್ಳಲಿದ್ದಾರೆ. ನಾಳೆ ಮುಖಂಡರ ಸಭೆ ಕರೆದಿದ್ದಾರೆ.
ನಾಳೆ ಉಸ್ತುವಾರಿ ವೇಣುಗೋಪಾಲ ರಾಜ್ಯದ ನಾಲ್ಕು ವಿಭಾಗಗಳ ಮುಖಂಡರ ಸಭೆ ಕರೆದಿದ್ದಾರೆ. ಬೆಳಗಾವಿ, ಕಲ್ಬುರ್ಗಿ, ಮೈಸೂರು ಮತ್ತು ಬೆಂಗಳೂರು ವಿಭಾಗಗಳ ಮುಖಂಡರ ಸಭೆ ನಡೆಸಲಿದ್ದಾರೆ. ಬಿಜೆಪಿಯ ವಿಸ್ತಾರಕ ಯೋಜನೆ ಕಾಂಗ್ರೆಸ್ ಮತಗಳನ್ನ ತನ್ನತ್ತ ಸೆಳೆಯುವಲ್ಲಿ ಸಕ್ಸಸ್ ಆಗಿದೆ. ವಿಸ್ತಾರಕಕ್ಕೆ ತಿರುಗೇಟು ನೀಡುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಬಗ್ಗೆ ಸಭೆಲೀ ಚರ್ಚೆ ನಡೆಸಲಿದ್ದಾರೆ.
ಸಚಿವರಾದವರು ಪಕ್ಷ ಸಂಘಟನೆಯನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಉಸ್ತುವಾರಿ ಉಸ್ತುವಾರಿ ಜಿಲ್ಲೆಯ ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸುತ್ತಿಲ್ಲ. ಜೊತೆಗೆ ವಿಧಾನಸೌಧದಲ್ಲೂ ಇರಲ್ಲ ಅನ್ನೋ ಕಾರ್ಯಕರ್ತರ ದೂರು ವೇಣುಗೋಪಾಲ ಕಿವಿಗೆ ಬಿದ್ದಿದ್ದು, ಈ ವಿಚಾರವಾಗಿ ವೇಣುಗೋಪಾಲ ನಾಳೆ ಸಚಿವರನ್ನ ತರಾಟೆಗೆ ತಗೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ನಾಳೆ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 9 ಗಂಟೆಯವರೆಗೂ ಸಭೆ ನಡೆಸಲು ವೇಣುಗೋಪಾಲ ರೆಡಿಯಾಗಿದ್ದಾರೆ. ಸಭೆಲೀ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್, ಕಾರ್ಯಾಧ್ಯಕ್ಷರಾದ ದಿನೇಶ ಗುಂಡೂರಾವ್, ಎಸ್ ಆರ್ ಪಾಟೀಲ್ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಹಾಗೂ ಎಐಸಿಸಿ ಕಾರ್ಯದರ್ಶಿಗಳು ಪಾಲ್ಗೊಳ್ಳಲಿದ್ದಾರೆ.
